ಮಣಿಪಾಲ್ ಮ್ಯಾರಥಾನ್: ಚೈತ್ರಾ, ನಂಜುಂಡಪ್ಪಗೆ ಚಿನ್ನ

KannadaprabhaNewsNetwork |  
Published : Feb 12, 2024, 01:31 AM IST
ಮ್ಯಾರಥಾನ್ ಚಾಂಪಿಯನ್ಸ್ | Kannada Prabha

ಸಾರಾಂಶ

ಆಫ್ರಿಕನ್ ದೇಶಗಳ ಓಟಗಾರರ ಅನುಪಸ್ಥಿತಿಯಲ್ಲಿ ಮಣಿಪಾಲ ಮ್ಯಾರಥಾನ್‌ನಲ್ಲಿ ಈ ಬಾರಿ ಭಾರತೀಯರೇ ಪ್ರಾಬಲ್ಯ ಸಾಧಿಸಿದ್ದಾರೆ. ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಎಂ.ನಂಜುಂಡಪ್ಪ, ಮಹಿಳೆಯರ ವಿಭಾಗದಲ್ಲಿ ಚೈತ್ರಾ ದೇವಾಡಿಗ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಆಫ್ರಿಕನ್ ದೇಶಗಳ ಓಟಗಾರರ ಅನುಪಸ್ಥಿತಿಯಲ್ಲಿ ಮಣಿಪಾಲ ಮ್ಯಾರಥಾನ್‌ನಲ್ಲಿ ಈ ಬಾರಿ ಭಾರತೀಯರೇ ಪ್ರಾಬಲ್ಯ ಸಾಧಿಸಿದ್ದಾರೆ. ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಎಂ.ನಂಜುಡಪ್ಪ, ಮಹಿಳೆಯರ ವಿಭಾಗದಲ್ಲಿ ಚೈತ್ರಾ ದೇವಾಡಿಗ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ನಂಜುಂಡಪ್ಪ 2 ಗಂಟೆ 47:18 ಗಂಟೆಗಳಲ್ಲಿ ಕ್ರಮಿಸಿದರೆ, ಸಚಿನ್ ಪೂಜಾರಿ, ಚೇತ್ರಾಮ್ ಕುಮಾರ್ ಕ್ರಮವಾಗಿ 2, 3ನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಚೈತ್ರಾ ದೇವಾಡಿಗ 3 ಗಂಟೆ 26:29 ಗಂಟೆಗಳಲ್ಲಿ ತಲುಪಿ ಚಿನ್ನ ಗೆದ್ದರೆ, ಜಸ್ಮಿತಾ ಕೊಡೆಂಕಿರಿ ಬೆಳ್ಳಿ ಪಡೆದರು. ಪುರುಷರ ಹಾಫ್‌ ಮ್ಯಾರಥಾನ್‌ನಲ್ಲಿ ವೈಭವ್ ಪಾಟೀಲ್, 10 ಕಿ.ಮೀ.ನಲ್ಲಿ ಮಣಿಕಂಠ, 5 ಕಿ.ಮೀ. ಓಟದಲ್ಲಿ ನಾಗರಾಜ್ ಚಿನ್ನ ಸಂಪಾದಿಸಿದರು. ಮಹಿಳೆಯರ ಹಾಫ್‌ ಮ್ಯಾರಥಾನ್‌ನಲ್ಲಿ ಅರ್ಚನಾ ಕೆ.ಎಂ, 10 ಕಿ.ಮೀ.ನಲ್ಲಿ ರೂಪಶ್ರೀ ಎನ್.ಎಸ್. 5 ಕಿ.ಮೀ.ನಲ್ಲಿ ಉಷಾ ಚಾಂಪಿಯನ್‌ ಆದರು. ಮ್ಯಾರಥಾನ್‌ನಲ್ಲಿ ದೇಶ ವಿದೇಶಗಳಿಂದ ಸುಮಾರು 15000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ