ಕೋಲ್ಕತ್ತ: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರುವ ಕನಸಿನಲ್ಲಿದ್ದ ಬೆಂಗಳೂರು ಬುಲ್ಸ್ ಕನಸು ನುಚ್ಚುನೂರಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 28-50 ಅಂಕಗಳ ಹೀನಾಯ ಸೋಲನುಭವಿಸಿ, ಇನ್ನೂ 2 ಪಂದ್ಯ ಬಾಕಿಯಿರುವಾಗಲೇ ಪ್ಲೇ-ಆಫ್ ಆಸೆ ಕೈಬಿಟ್ಟಿದೆ.
ಬುಲ್ಸ್ ಸದ್ಯ 19 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 48 ಅಂಕ ಸಂಪಾದಿಸಿದ್ದು, 8ನೇ ಸ್ಥಾನದಲ್ಲೇ ಬಾಕಿಯಾಗಿದೆ. ಅತ್ತ ಬುಲ್ಸ್ ವಿರುದ್ಧ ಬೃಹತ್ ಗೆಲುವು ದಾಖಲಿಸುವ ಮೂಲಕ ಗುಜರಾತ್ ಜೈಂಟ್ಸ್ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.
ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್, ತಮಿಳ್ ತಲೈವಾಸ್ ವಿರುದ್ಧ 56-29 ಅಂಕಗಳ ಬೃಹತ್ ಜಯ ದಾಖಲಿಸಿತು.
ಇಂದಿನ ಪಂದ್ಯಗಳು: ಯು.ಪಿ ಮತ್ತು ಜೈಪುರ್
ರಾತ್ರಿ 8ಕ್ಕೆ, ಬೆಂಗಾಲ್ ಮತ್ತು ಯು ಮುಂಬಾ ರಾತ್ರಿ 9ಕ್ಕೆ