ಇಂದಾದ್ರೂ ಗೆಲ್ಲುತ್ತಾ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌?

KannadaprabhaNewsNetwork |  
Published : Apr 07, 2024, 01:47 AM ISTUpdated : Apr 07, 2024, 04:38 AM IST
ಹಾರ್ದಿಕ್‌-ರೋಹಿತ್‌ | Kannada Prabha

ಸಾರಾಂಶ

ಟೂರ್ನಿಯ ಮೊದಲ ಜಯಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸು. ಸೂರ್ಯಕುಮಾರ್ ತಂಡಕ್ಕೆ ಮರಳಿರುವುದು ಬ್ಯಾಟಿಂಗ್‌ ವಿಭಾಗಕ್ಕೆ ಬಲ. ರೋಹಿತ್‌, ಇಶಾನ್‌ರಿಂದ ತಂಡ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ.

ಮುಂಬೈ: ಹ್ಯಾಟ್ರಿಕ್‌ ಸೋಲಿನೊಂದಿಗೆ 17ನೇ ಆವೃತ್ತಿ ಐಪಿಎಲ್ ಅಭಿಯಾನ ಆರಂಭಿಸಿರುವ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮೊದಲ ಗೆಲುವಿನ ಹುಡುಕಾಟದಲ್ಲಿದ್ದು, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದೆ. 

ಡೆಲ್ಲಿ ಕೂಡಾ ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಜಯದ ಹಳಿಗೆ ಮರಳುವ ಕಾತರದಲ್ಲಿದೆ.ಇತ್ತಂಡಗಳೂ ತಲಾ 3 ಪಂದ್ಯಗಳಲ್ಲಿ ಸೋಲನುಭವಿಸಿವೆ. ಮುಂಬೈ ಎಲ್ಲಾ ವಿಭಾಗದಲ್ಲೂ ವಿಫಲವಾಗಿದ್ದು, ಸುಧಾರಿತ ಪ್ರದರ್ಶನ ಅಗತ್ಯವಿದೆ. ಸೂರ್ಯಕುಮಾರ್ ತಂಡಕ್ಕೆ ಮರಳಿರುವುದು ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದೆ. 

ಅಭಿಮಾನಿಗಳಿಂದಲೂ ಭಾರಿ ಟೀಕೆಗೊಳಗಾಗುತ್ತಿರುವ ನಾಯಕ ಹಾರ್ದಿಕ್‌ ಪಾಂಡ್ಯ ತಮ್ಮ ಆಟದ ಮೂಲಕ ಎಲ್ಲರ ಬಾಯಿ ಮುಚ್ಚಿಸಬೇಕಿದೆ. ರೋಹಿತ್‌, ಇಶಾನ್‌ರಿಂದ ತಂಡ ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ.ಅತ್ತ ಡೆಲ್ಲಿ ಕಳೆದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ 106 ರನ್‌ ಸೋಲನುಭವಿಸಿತ್ತು. ಪಂತ್‌ ಸತತ 2 ಅರ್ಧಶತಕ ಬಾರಿಸಿದ್ದರೂ ಇತರರಿಂದ ಸೂಕ್ತ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಮೊನಚು ಕಳೆದುಕೊಂಡಿರುವ ಬೌಲಿಂಗ್‌ ವಿಭಾಗಕ್ಕೆ ಮತ್ತೆ ಭಾರಿ ಸವಾಲು ಎದುರಾಗುವುದು ಖಚಿತ.

ಒಟ್ಟು ಮುಖಾಮುಖಿ: 33ಮುಂಬೈ: 18ಡೆಲ್ಲಿ: 15

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ಇಶಾನ್‌, ರೋಹಿತ್‌, ತಿಲಕ್‌, ಸೂರ್ಯ, ಹಾರ್ದಿಕ್‌(ನಾಯಕ), ಡೇವಿಡ್‌, ಕೋಟ್ಜೀ, ಚಾವ್ಲಾ, ಮಧ್ವಾಲ್‌, ಬೂಮ್ರಾ, ಮಫಾಕ. 

ಡೆಲ್ಲಿ: ಪೃಥ್ವಿ ಶಾ, ವಾರ್ನರ್, ಮಾರ್ಷ್‌, ರಿಷಭ್‌ ಪಂತ್‌(ನಾಯಕ), ಸ್ಟಬ್ಸ್‌, ಅಕ್ಷರ್‌, ಸುಮಿತ್‌, ರಾಸಿಕ್‌, ನೋಕಿಯಾ, ಇಶಾಂತ್‌, ಖಲೀಲ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!
ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?