ನಿವೃತ್ತಿ ಬಗ್ಗೆ ನನ್ನ ದೇಹ ನಿರ್ಧರಿಸುತ್ತದೆ : ಧೋನಿ

Published : Apr 07, 2025, 08:43 AM IST
MS Dhoni

ಸಾರಾಂಶ

: ಐಪಿಎಲ್‌ನಿಂದ ನಿವೃತ್ತಿಯಾಗುವ ಬಗ್ಗೆ ಭಾರತದ ದಿಗ್ಗಜ ಕ್ರಿಕೆಟಿಗ ಎಂ.ಎಸ್‌.ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯ ಬಗ್ಗೆ ನಾನಲ್ಲ, ನನ್ನ ದೇಹ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

 ನವದೆಹಲಿ: ಐಪಿಎಲ್‌ನಿಂದ ನಿವೃತ್ತಿಯಾಗುವ ಬಗ್ಗೆ ಭಾರತದ ದಿಗ್ಗಜ ಕ್ರಿಕೆಟಿಗ ಎಂ.ಎಸ್‌.ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯ ಬಗ್ಗೆ ನಾನಲ್ಲ, ನನ್ನ ದೇಹ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಿಎಸ್‌ಕೆ ಆಟಗಾರ ಧೋನಿ, ‘ನಾನು ಈಗಲೂ ಐಪಿಎಲ್‌ ಆಡುತ್ತಿದ್ದೇನೆ ಮತ್ತು ಸದ್ಯಕ್ಕೆ 1 ವರ್ಷದ ಐಪಿಎಲ್‌ ಬಗ್ಗೆ ಮಾತ್ರ ಯೋಚಿಸುತ್ತೇನೆ. ಈ ಐಪಿಎಲ್‌ ಮುಗಿದು, ಜುಲೈನಲ್ಲಿ ನನಗೆ 44 ವರ್ಷವಾಗುತ್ತದೆ. ಇನ್ನೊಂದು ವರ್ಷ ಆಡಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳಲು ನನಗೆ 10 ತಿಂಗಳ ಸಮಯಾವಕಾಶವಿದೆ’ ಎಂದಿದ್ದಾರೆ.

 

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌