ರೇಪ್‌ ಕೇಸ್‌: ಕ್ರಿಕೆಟಿಗ ಸಂದೀಪ್‌ಗೆ 8 ವರ್ಷ ಜೈಲು

KannadaprabhaNewsNetwork |  
Published : Jan 11, 2024, 01:30 AM ISTUpdated : Jan 11, 2024, 11:35 AM IST
ಸಂದೀಪ್‌ ಲಾಮಿಚ್ಚಾನೆ | Kannada Prabha

ಸಾರಾಂಶ

ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿಯಾಗಿರುವ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಾಮಿಚ್ಚಾನೆಗೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 3 ಲಕ್ಷ ನೇಪಾಳಿ ರು. ದಂಡ ಹಾಕಿದೆ.

ಕಾಠ್ಮಂಡು: ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿಯಾಗಿರುವ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಾಮಿಚ್ಚಾನೆಗೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 3 ಲಕ್ಷ ನೇಪಾಳಿ ರು. ದಂಡ ಹಾಕಿದೆ. 

ಕಳೆದ ಆಗಸ್ಟ್‌ನಲ್ಲಿ ಯುವತಿಯಿಂದ ಅತ್ಯಾಚಾರ ಆರೋಪ ಕೇಳಿಬಂದ ಬಳಿಕ ಬಂಧನಕ್ಕೆ ಒಳಗಾಗಿದ್ದ ಸಂದೀಪ್‌, ಜಾಮೀನಿನ ಮೇಲೆ ಹೊರಬಂದಿದ್ದರು. ತೀರ್ಪಿನ ವಿರುದ್ಧ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಂದೀಪ್‌ ಪರ ವಕೀಲರು ತಿಳಿಸಿದ್ದಾರೆ.

ಏನಿದು ಪ್ರಕರಣ: ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಾಮಿಚ್ಚಾನೆ ಅತ್ಯಾಚಾರ ಪ್ರಕರಣವೊಂದ ರಲ್ಲಿ ದೋಷಿಯಾಗಿದ್ದಾರೆ. ಕಾಠ್ಮಂಡು ಜಿಲ್ಲಾ ನ್ಯಾಯಾಲಯವು ಅವರಿಗೆ 8 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಕಳೆದ ವರ್ಷ ಅಗಸ್ಟ್‌ನಲ್ಲಿ ಯುವತಿಯೋರ್ವಳು ಮಾಡಿದ ಆರೋಪದಿಂದಾಗಿ ಅವರ ಬಂಧನವಾಗಿತ್ತು, ನಂತರ ಜಾಮೀನ ಪಡೆದು ಹೊರಬಂದಿದ್ದರು.

ತಂಡದಿಂದ ಶೂಟರ್‌ ಹೊರಕ್ಕೆ!
ನಹದೆಹಲಿ: ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತ ತಂಡದಿಂದ ಶೂಟರ್‌ ಒಬ್ಬರನ್ನು ಹೊರಹಾಕಲಾಗಿದೆ. ಸದ್ಯ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ ಶೂಟರ್‌ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಕರಣ ನಡೆದಿರುವುದು ನಿಜ ಎಂದಿರುವ ಭಾರತೀಯ ರೈಫಲ್‌ ಶೂಟಿಂಗ್ ಸಂಸ್ಥೆಯು, ಶೂಟರ್‌ ಹೆಸರನ್ನು ಬಹಿರಂಗಪಡಿಸಿಲ್ಲ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?
ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!