ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚಾಂಪಿಯನ್‌ಶಿಪ್ ಬಗ್ಗೆ ಆಯೋಜಕರು ಮಾಹಿತಿ ಒದಗಿಸಿದರು. ಪದ್ಮನಾಭನಗರದಲ್ಲಿರುವ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ಸ್ಪರ್ಧೆಗಳು ನಡೆಯಲಿವೆ. ದೇಶದೆಲ್ಲೆಡೆಯಿಂದ ಸುಮಾರು 300 ಮಂದಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಲಿಂಪಿಯನ್ ಧಿನಿಧಿ ದೇಸಿಂಘು, ಹಾಶಿಕ ರಾಮಚಂದ್ರ, ಸಮರ್ಥ್ ಗೌಡ, ವಿನಿತಾ ನಯನ, ಆಕಾಶ್ ಮಣಿ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಈಜುಪಟುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಕೂಟ ಒಟ್ಟು 10 ಲಕ್ಷ ರು. ನಗದು ಬಹುಮಾನ ಹೊಂದಿದೆ ಎಂದು ಆಯೋಜಕರು ತಿಳಿಸಿದರು.ಒಲಿಂಪಿಯನ್ ಈಜುಪಟು, ಅರ್ಜುನ ಪ್ರಶಸ್ತಿ ವಿಜೇತ ನಿಶಾ ಮಿಲೆಟ್ ನ.9ರಂದು ಸಂಜೆ 5 ಗಂಟೆಗೆ ಚಾಂಪಿಯನ್‌ಶಿಪ್ ಉದ್ಘಾಟಿಸಲಿದ್ದಾರೆ. 50 ಮೀ. ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್‌ಸ್ಟ್ರೋಕ್, ಫ್ರೀಸ್ಟೈಲ್ ಹಾಗೂ ಬಟರ್‌ಫ್ಲೈ ವಿಭಾಗದಲ್ಲಿ ''''ಸ್ಕಿನ್ಸ್'''' ಸ್ಪರ್ಧೆಗಳು ಕೂಟದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಆಯೋಜಕರು ತಿಳಿಸಿದರು.
ನೆಟ್ಟಕಲ್ಲಪ್ಪ ಈಜು ಕೇಂದ್ರದ ಮುಖ್ಯಸ್ಥ ಡಾ.ವರುಣ್, ಕೋಚ್‌ಗಳಾದ ಅಂಕುಶ್, ಜಿಜೇಶ್, ಶರತ್ ಚಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.