ಎಸ್ಸೆಸ್ಸೆಫ್‌ ಬೆಂಗಳೂರು ಜಿಲ್ಲೆಗೆ ನವ ಸಾರಥ್ಯ : ನೂತನ ಅಧ್ಯಕ್ಷರಾಗಿ ಫಾರೂಕ್ ಅಮಾನಿ

KannadaprabhaNewsNetwork |  
Published : Feb 20, 2025, 12:49 AM ISTUpdated : Feb 20, 2025, 04:13 AM IST
ಎಸ್ಸೆಸ್ಸೆಫ್‌ | Kannada Prabha

ಸಾರಾಂಶ

ಕೆ‌.ಎಂ.ಜೆ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಹಮಾನ್ ಹಾಜಿ ಉದ್ಘಾಟಿಸಿದರು. ಕೋಆರ್ಡಿನೇಷನ್ ಸಮಿತಿ ಅಧ್ಯಕ್ಷ ಅನಸ್ ಸಿದ್ದೀಖಿ ತರಗತಿ ನಡೆಸಿಕೊಟ್ಟರು.

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್‌) ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು ಮಡಿವಾಳದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಲತೀಫ್ ನಈಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷ ಜಾಫರ್ ನೂರಾನಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು‌. ಕೆ‌.ಎಂ.ಜೆ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಹಮಾನ್ ಹಾಜಿ ಉದ್ಘಾಟಿಸಿದರು. 

ಕೋಆರ್ಡಿನೇಷನ್ ಸಮಿತಿ ಅಧ್ಯಕ್ಷ ಅನಸ್ ಸಿದ್ದೀಖಿ ತರಗತಿ ನಡೆಸಿಕೊಟ್ಟರು.ರಾಜ್ಯ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಮುಸ್ತಾಫಾ ನಈಮಿ ಸಖಾಫಿ ಮತ್ತು ಜಿಲ್ಲಾ ಉಸ್ತುವಾರಿ ಮುಜೀಬ್ ಕೊಡಗು ಕೌನ್ಸಿಲ್‌ಗೆ ನೇತೃತ್ವ ನೀಡಿದರು. ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಶಂಸುದ್ದೀನ್ ಜೆ ಪಿ ನಗರ ವಾರ್ಷಿಕ ವರದಿ, ಕೋಶಾಧಿಕಾರಿ ಅಖ್ತರ್ ಹುಸೈನ್ ಲೆಕ್ಕಪತ್ರವನ್ನು ಮಂಡಿಸಿದರು.

ಬಳಿಕ ಕ್ರಮವಾಗಿ ಶಂಸು ಗಾಂಜಾಲ್ ಮೀಡಿಯಾ, ಅಲ್ತಾಫ್ ಅಲಿ ಸಿಸಿ, ಅಬೂಬಕ್ಕರ್ ಅಹ್ಸನಿ ರೈನ್‌ಬೋ, ಫಾರೂಕ್ ಅಮಾನಿ ಕ್ಯೂಡಿ, ಸಂಶುದ್ದೀನ್ ಜೆ.ಪಿ. ನಗರ ಪಬ್ಲಿಕೇಶನ್, ಹೈದರ್ ಎಲೆಕ್ಟ್ರಾನಿಕ್ ಸಿಟಿ ದಅವಾ, ಶಬೀಬ್ ಕ್ಯಾಂಪಸ್, ಖಲೀಲ್ ವಿಸ್ಡಮ್, ಜುನೈದ್ ಹಿಮಮಿ ಐಟಿ ವರದಿಯನ್ನು ವಾಚಿಸಿದರು. ಬಳಿಕ ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಹೊಸ ಸಮಿತಿಯನ್ನು ಆರಿಸಲಾಯಿತು.ನೂತನ ಅಧ್ಯಕ್ಷರಾಗಿ ಫಾರೂಕ್ ಅಮಾನಿ, ಕಾರ್ಯದರ್ಶಿಯಾಗಿ ಅಲ್ತಾಫ್ ಅಲಿ, ಕೋಶಾಧಿಕಾರಿಯಾಗಿ ಮುಸ್ತಾಕ್ ರವರನ್ನು ನೇಮಕಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಂ.ಎ ಕೋಶಾಧಿಕಾರಿ ಸತ್ತಾರ್ ಉಸ್ತಾದ್, ಎಸ್.ಜೆ.ಎಂ ಕಾರ್ಯದರ್ಶಿ ತಾಜುದ್ದೀನ್ ಫಾಳಿಲಿ, ಎಸ್.ವೈ.ಎಸ್ ರಾಜ್ಯ ನಾಯಕರಾದ ನಾಸಿರ್ ಕ್ಲಾಸಿಕ್, ಜಿಲ್ಲಾ ನಾಯಕರಾದ ಫಿರ್ದೌಸ್, ಸರ್ಶಾದ್ ಮತ್ತು ರಾಜ್ಯ ರೈಂನ್ಬೊ ಕಾರ್ಯದರ್ಶಿ ಶಿಹಾಬ್ ಮಡಿವಾಳ ಉಪಸ್ಥಿತರಿದ್ದರು. ಸಿಸಿ ಕಾರ್ಯದರ್ಶಿ ಅಲ್ತಾಫ್ ಅಲಿ ಸ್ವಾಗತಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!