;Resize=(412,232))
ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 720 ರನ್‌ಗಳ ಬೃಹತ್ ಮೊತ್ತ ಪೇರಿಸಿ ಕೆಲ ಮಹತ್ವದ ದಾಖಲೆಗಳನ್ನು ಬರೆಯಿತು. ಆ ದಾಖಲೆಗಳ ವಿವರ ಇಲ್ಲಿದೆ.
ಇದು ನ್ಯೂಜಿಲೆಂಡ್ ನೆಲದಲ್ಲಿ ನಡೆದ ಟೆಸ್ಟ್‌ನಲ್ಲಿ ಯಾವುದೇ ತಂಡ ಇನ್ನಿಂಗ್ಸ್‌ವೊಂದರಲ್ಲಿ ದಾಖಲಿಸಿದ ಅತ್ಯಧಿಕ ಮೊತ್ತ. 2019ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ ಗಳಿಸಿದ್ದ 6 ವಿಕೆಟ್‌ಗೆ 715 ರನ್‌ಗಳ ದಾಖಲೆಯನ್ನು ಭಾರತ ಮುರಿದಿದೆ.
ನ್ಯೂಜಿಲೆಂಡ್ ವಿರುದ್ಧ ಇನ್ನಿಂಗ್ಸ್‌ವೊಂದರಲ್ಲಿ 700 ರನ್ ದಾಖಲಿಸಿದ ವಿಶ್ವದ ಮೊದಲ ತಂಡ ಭಾರತ. 1995ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ವೆಸ್ಟ್ಇಂಡೀಸ್ 5 ವಿಕೆಟ್‌ಗೆ 660 ರನ್ ಗಳಿಸಿದ್ದು ಈ ಹಿಂದಿನ ದಾಖಲೆ.
ಟೆಸ್ಟ್‌ನಲ್ಲಿ ಇದು ಭಾರತದ 3ನೇ ಹಾಗೂ ತವರಿನಾಚೆ ಭಾರತದ ಗರಿಷ್ಠ ಮೊತ್ತ. ಈ ಮೊದಲು ಲಂಕಾ ವಿರುದ್ಧ 2010ರಲ್ಲಿ ಕೊಲೊಂಬೊದಲ್ಲಿ ಗಳಿಸಿದ್ದ 707 ರನ್, ತವರಿನಾಚೆ ಭಾರತದ ಗರಿಷ್ಠ ಮೊತ್ತ ಎನಿಸಿತ್ತು.
ಭಾರತ 5ನೇ ಸಲ 700+ ಮೊತ್ತ
ಭಾರತ ಟೆಸ್ಟ್ ಇನ್ನಿಂಗ್ಸಲ್ಲಿ 5ನೇ ಬಾರಿಗೆ 700ಕ್ಕೂ ಹೆಚ್ಚು ರನ್ ಗಳಿಸಿದೆ. ಶ್ರೀಲಂಕಾ 7 ಬಾರಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ. ಭಾರತ 2ನೇ ಸ್ಥಾನದಲ್ಲಿದೆ.
ಮೊದಲ 7 ವಿಕೆಟ್‌ಗೆ 50+ ಜತೆಯಾಟ
ಭಾರತದ ಇನ್ನಿಂಗ್ಸಲ್ಲಿ ಮೊದಲ 7 ವಿಕೆಟ್‌ಗೆ ಕನಿಷ್ಠ 50+ ರನ್ ಜೊತೆಯಾಟ ಮೂಡಿಬಂತು. ಟೆಸ್ಟ್ ಇತಿಹಾಸದಲ್ಲೇ ಇದು ಮೊದಲು. ಒಟ್ಟಾರೆ ಟೆಸ್ಟ್ ಇನ್ನಿಂಗ್ಸಲ್ಲಿ 7ಕ್ಕೂ ಹೆಚ್ಚು 50+ ರನ್ ಜೊತೆಯಾಟ ದಾಖಲಾಗಿದ್ದು ಇದು ಕೇವಲ 3ನೇ ಬಾರಿ.
6 ಬ್ಯಾಟರ್ಸ್ ತಲಾ 70+ ಇದೇ ಮೊದಲು
ಭಾರತದ ಇನ್ನಿಂಗ್ಸಲ್ಲಿ 6 ಬ್ಯಾಟರ್‌ಗಳು 70ಕ್ಕೂ ಹೆಚ್ಚು ರನ್ ಗಳಿಸಿದರು. ಟೆಸ್ಟ್ ಇತಿಹಾಸದಲ್ಲಿ ಇದು ಮೊದಲು. ಅಗ್ರ-5 ಬ್ಯಾಟರ್‌ಗಳು 80ಕ್ಕೂ ಹೆಚ್ಚು ರನ್ ಗಳಿಸಿದರು. ಇದು ಕೇವಲ 2ನೇ ಬಾರಿ.