ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ಅನುಶ್‌ ಅಗರ್‌ವಾಲ್‌ಗೆ ಒಲಿಂಪಿಕ್ಸ್‌ ಟಿಕೆಟ್‌

KannadaprabhaNewsNetwork |  
Published : Feb 21, 2024, 02:00 AM IST
ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ಅನುಶ್‌ ಅಗರ್‌ವಾಲ್‌ಗೆ ಒಲಿಂಪಿಕ್ಸ್‌ ಟಿಕೆಟ್‌ | Kannada Prabha

ಸಾರಾಂಶ

ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತದ ಅನುಶ್‌ ಅಗರ್‌ವಾಲ್‌ ಈಕ್ವೆಸ್ಟ್ರಿಯನ್‌(ಕುದುರೆ ರೇಸ್‌)ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ನವದೆಹಲಿ: ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತದ ಅನುಶ್‌ ಅಗರ್‌ವಾಲ್‌ ಈಕ್ವೆಸ್ಟ್ರಿಯನ್‌(ಕುದುರೆ ರೇಸ್‌)ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಸೋಮವಾರ ಭಾರತೀಯ ಈಕ್ವೆಸ್ಟ್ರಿಯನ್‌ ಫೆಡರೇಶನ್‌ ಮಾಹಿತಿ ನೀಡಿದ್ದು, ಅನುಶ್‌ ಡ್ರೆಸ್ಸೇಜ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದಿದೆ.ಕಳೆದ ವರ್ಷ ಏಷ್ಯಾಡ್‌ನಲ್ಲಿ ಐತಿಹಾಸಿಕ ಕಂಚು ಜಯಿಸಿದ್ದ 24ರ ಅನುಶ್‌, 4 ಅಂತಾರಾಷ್ಟ್ರೀಯ ಈಕ್ವೆಸ್ಟ್ರಿಯನ್‌ ಕೂಟಗಳ ಮೂಲಕ ಒಲಿಂಪಿಕ್ಸ್‌ ಅರ್ಹತೆ ಪಡೆದುಕೊಂಡಿದ್ದಾರೆ. ಅನೀಶ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 8ನೇ ಈಕ್ವೆಸ್ಟ್ರಿಯನ್‌ ಪಟು.

ಈ ಮೊದಲು ದಾರ್ಯಾ ಸಿಂಗ್‌, ಜೀತೆಂದ್ರಜಿತ್‌ ಸಿಂಗ್‌, ಹುಸೈನ್‌ ಸಿಂಗ್‌, ಮೊಹಮದ್‌ ಖಾನ್‌(1980-ಮಾಸ್ಕೋ), ಇಂದ್ರಜಿತ್‌ ಲಂಬಾ(1996-ಅಟ್ಲಾಂಟಾ), ಇಂತಿಯಾಜ್‌ ಅನೀಸ್‌(2000-ಸಿಡ್ನಿ) ಹಾಗೂ ಫೌಆದ್‌ ಮಿರ್ಜಾ(2022-ಟೋಕಿಯೋ) ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ