ಫೆ.15ರಿಂದ ಲಿಬರ್‌ವಿನ್ ಚಾಂಪಿಯನ್‌ಶಿಪ್: ಅಡ್ವಾಣಿ ಸೇರಿ 16 ಕ್ಯೂಯಿಸ್ಟ್‌ಗಳ ಸ್ಪರ್ಧೆ

KannadaprabhaNewsNetwork |  
Published : Feb 14, 2026, 01:15 AM IST
ಪಂಕಜ್ | Kannada Prabha

ಸಾರಾಂಶ

ಈ ಪಂದ್ಯಾವಳಿ ಫೆಬ್ರವರಿ 15ರಿಂದ 17 ರವರೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್ (ಕೆಎಸ್‌ಬಿಎ)ನಲ್ಲಿ ನಡೆಯಲಿದೆ.

ಬೆಂಗಳೂರು: ವಿಶ್ವದ ಪ್ರಮುಖ ಕ್ಯೂ ಸ್ಪೋರ್ಟ್ಸ್ ಟೇಬಲ್‌ಕ್ಲ್ಯಾಥ್ ತಯಾರಕರಾದ ಲಿಬರ್ ವಿನ್ ಕ್ಲಾತ್, ಭಾರತದ 16 ಉನ್ನತ ವೃತ್ತಿಪರ ಆಟಗಾರರನ್ನು ಒಳಗೊಂಡ ಸ್ನೂಕರ್ ಲಿಬರ್ ವಿನ್ ಚಾಂಪಿಯನ್ಸ್ ಕಪ್ ನಡೆಸುತ್ತಿದೆ. ಈ ಪಂದ್ಯಾವಳಿ ಫೆಬ್ರವರಿ 15ರಿಂದ 17 ರವರೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್ (ಕೆಎಸ್‌ಬಿಎ)ನಲ್ಲಿ ನಡೆಯಲಿದೆ.ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್, ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಶನ್ ಆಫ್ ಇಂಡಿಯಾ (ಬಿಎಸ್‌ಎಫ್‌ಐ) ಆಶ್ರಯದಲ್ಲಿ ಈ ಚಾಂಪಿಯನ್‌ಶಿಪ್ ನಡೆಸಲಾಗುತ್ತಿದ್ದು, ಇದು ದೇಶದ ಅತ್ಯಂತ ಪ್ರತಿಷ್ಠಿತ ದೇಶೀಯ ಸ್ನೂಕರ್ ಈವೆಂಟ್‌ಗಳಲ್ಲಿ ಒಂದಾಗಿರಲಿದೆ. ಭಾರತದ ಅತ್ಯಂತ ಪ್ರಸಿದ್ಧ ಕ್ಯೂಯಿಸ್ಟ್ ಮತ್ತು 28 ಬಾರಿ ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ, ವಿಶ್ವ ಚಾಂಪಿಯನ್‌ಗಳಾದ ಸೌರವ್ ಕೊಠಾರಿ, ಶ್ರೀಕೃಷ್ಣ ಎಸ್, ಲಕ್ಷ್ಮಣ್ ರಾವತ್, ಕಮಲ್ ಚಾವ್ಲಾ ಮತ್ತು ದೇಶದ ಉನ್ನತ ಅಂತಾರಾಷ್ಟ್ರೀಯ ಪದಕ ವಿಜೇತರನ್ನು ಒಳಗೊಂಡ ಕ್ಯೂಯಿಸ್ಟ್‌ಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಜಾಗತಿಕವಾಗಿ ತನ್ನ ಉನ್ನತ-ಕಾರ್ಯಕ್ಷಮತೆಯ ಮೇಜು ಬಟ್ಟೆಗಳಿಗೆ ಹೆಸರುವಾಸಿಯಾದ ಲಿಬರ್ ವಿನ್, ಸ್ನೂಕರ್ ಇತಿಹಾಸದಲ್ಲಿ ರೋನಿ ಓಸುಲ್ಲಿವಾನ್, ಮಾರ್ಕ್ ಸೆಲ್ಬಿ, ಜಾನ್ ಹಿಗ್ಗಿನ್ಸ್ ಸೇರಿದಂತೆ ಇತರ ದಂತಕಥೆಗಳನ್ನು ತನ್ನ ಜಾಗತಿಕ ಬ್ರಾಂಡ್ ರಾಯಭಾರಿಗಳಾಗಿ ಹೊಂದಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಸೌತ್ ಯುನೈಟೆಡ್ ಫುಟ್ಬಾಲ್‌ ಕ್ಲಬ್‌ನ ಸ್ಪೋರ್ಟ್ಸ್ ಮೆಡಿಸಿನ್, ವೈದ್ಯಕೀಯ ಪಾಲುದಾರರಾಗಿ ಹೊಸ್ಮಟ್ ಆಸ್ಪತ್ರೆ
ನಮೀಬಿಯಾ ವಿರುದ್ಧ ರಿಹರ್ಸಲ್‌ನಲ್ಲಿ ಭಾರತ ಸಕ್ಸಸ್