ಪೆನ್‌ ಪಾಯಿಂಟ್‌ ಕ್ರಿಕೆಟ್‌: ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌, ಅಟ್ಯಾಕರ್ಸ್‌ ರನ್ನರ್‌-ಅಪ್‌

KannadaprabhaNewsNetwork |  
Published : Jan 29, 2026, 01:15 AM IST
ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌, ಅಟ್ಯಾಕರ್ಸ್‌ ರನ್ನರ್‌-ಅಪ್‌ | Kannada Prabha

ಸಾರಾಂಶ

ಎಮಾರ್‌ ಸ್ಟ್ರೈಕರ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ಪ್ರಮುಖ ಪಾತ್ರ ವಹಿಸಿದ ಸ್ಟಾರ್‌ ಆಟಗಾರ ಶಬೀರ್‌ ರೆಂಜ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿ ಸಾಬಿತ್‌ ಕುಂಬ್ರ ಪಾಲಾಯಿತು.

ಕಾಸರಗೋಡು: ಸಾಮಾಜಿಕ ಹೋರಾಟ, ಕಾರ್ಯಾಗಾರ, ಬಡವರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಆರ್ಥಿಕ ಸಹಾಯ ಸೇರಿದಂತೆ ವಿವಿಧ ಸಮಾಜ ಸೇವೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ‘ಪೆನ್‌ ಪಾಯಿಂಟ್‌ ಸ್ನೇಹ ವೇದಿಕೆ’ ಆಯೋಜಿಸಿದ 5ನೇ ಆವೃತ್ತಿಯ ಕ್ರಿಕೆಟ್‌ ಫೆಸ್ಟ್‌ನಲ್ಲಿ ಎಮಾರ್‌ ಸ್ಟ್ರೈಕರ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಟ್ಯಾಕರ್ಸ್‌ ತಂಡ ರನ್ನರ್‌-ಅಪ್‌ ಸ್ಥಾನ ಪಡೆದುಕೊಂಡಿತು. ಕೇರಳದ ಕಾಸರಗೋಡು ಜಿಲ್ಲೆಯ ಲಾರ್ಡ್ಸ್‌ ಮೈದಾನದಲ್ಲಿ ಈ ಬಾರಿ ಟೂರ್ನಿ ನಡೆಯಿತು. ನ್ಯಾಯವಾದಿ ಅಶ್ರಫ್‌ ಕನ್ಯಾರಕೋಡಿ ಮಾಲಕತ್ವದ, ಸಾಬಿತ್‌ ಕುಂಬ್ರ ನಾಯಕತ್ವದ ಎಮಾರ್‌ ಸ್ಟ್ರೈಕರ್ಸ್‌ ತಂಡ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿ, ಅಧಿಕಾರಯುತವಾಗಿ ಕಿರೀಟ ಮುಡಿಗೇರಿಸಿಕೊಂಡಿತು. ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಹಕೀಮ್‌ ಪದಡ್ಕ ಮಾಲಕತ್ವದ, ರಾಝಿಕ್ ಬಿ.ಎಂ. ನಾಯಕತ್ವದ ಅಟ್ಯಾಕರ್ಸ್‌ ತಂಡ ಈ ಬಾರಿ ಅತ್ಯಾಕರ್ಷಕ ಆಟದ ಮೂಲಕ ಗಮನ ಸೆಳೆಯುವುದರ ಜೊತೆಗೆ, ಫೈನಲ್‌ ಕೂಡಾ ಪ್ರವೇಶಿಸಿತು. ಆದರೆ ಫೈನಲ್‌ನಲ್ಲಿ ಎಮಾರ್‌ ತಂಡದ ವಿರುದ್ಧ ವೀರೋಚಿತ ಸೋಲು ಕಂಡು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರೋಚಕ ಸೆಣಸಾಟ:

ಟೂರ್ನಿಯಲ್ಲಿ ಈ ಬಾರಿ ಒಟ್ಟು 6 ತಂಡಗಳು ಪಾಲ್ಗೊಂಡವು. ಎಮಾರ್‌ ಸ್ಟ್ರೈಕರ್ಸ್‌, ಅಟ್ಯಾಕರ್ಸ್‌ ಜೊತೆಗೆ ಅಶ್ರಫ್‌ ನಟ್ಟಿಬೈಲ್‌ ಮಾಲಿಕತ್ವದ ಗೋಲ್ಡನ್‌ ಯಾರ್ಕರ್ಸ್‌, ಕಳೆದೆರಡು ಬಾರಿ ಚಾಂಪಿಯನ್‌ ಆಗಿದ್ದ ಉದ್ಯಮಿ ಇರ್ಫಾನ್‌ ಕನ್ಯಾರಕೋಡಿ ಮಾಲಿಕತ್ವದ ಬ್ಲೂ ಹಂಟರ್ಸ್‌, ಅಶ್ರಫ್ ಕಟ್ಟದಪಡ್ಪು ಮಾಲಕತ್ವದ ಚಾಲೆಂಜರ್ಸ್‌, ನೂರುದ್ದೀನ್‌ ಬಪ್ಪಳಿಗೆ ಒಡೆತನದ ಸ್ಪೋರ್ಟ್ಸ್‌ವರ್ಲ್ಡ್‌ ಕಿಂಗ್ಸ್‌ ತಂಡಗಳ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತು.

ಲೀಗ್‌ ಹಂತದಲ್ಲಿ ಎಮಾರ್‌ ಅಗ್ರಸ್ಥಾನಿಯಾದರೆ, ಅಟ್ಯಾಕರ್ಸ್‌ 2ನೇ ಸ್ಥಾನ ಪಡೆದುಕೊಂಡಿತು. ಚಾಲೆಂಜರ್ಸ್‌, ಬ್ಲೂ ಹಂಟರ್ಸ್‌ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದುಕೊಂಡಿತು. ಯಾರ್ಕರ್ಸ್‌ ತಂಡ 5ನೇ, ಸ್ಪೋರ್ಟ್ಸ್‌ವರ್ಲ್ಡ್‌ ಕಿಂಗ್ಸ್‌ 6ನೇ ಸ್ಥಾನಕ್ಕೆ ತೃಪ್ತಿಪಟ್ಟು ಗುಂಪು ಹಂತದಲ್ಲೇ ಹೊರಬಿದ್ದವು.ಎಮಾರ್‌ ಸ್ಟ್ರೈಕರ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ಪ್ರಮುಖ ಪಾತ್ರ ವಹಿಸಿದ ಸ್ಟಾರ್‌ ಆಟಗಾರ ಶಬೀರ್‌ ರೆಂಜ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿ ಸಾಬಿತ್‌ ಕುಂಬ್ರ ಪಾಲಾಯಿತು.ವೈಯಕ್ತಿಕ ಪ್ರಶಸ್ತಿಗಳ ಪಟ್ಟಿ:

ಸರಣಿ ಶ್ರೇಷ್ಠ: ಶಬೀರ್‌ ರೆಂಜ

ಶ್ರೇಷ್ಠ ಆಲ್ರೌಂಡರ್‌: ಶಿಹಾಬ್‌ ಉಬಾರ್‌

ಶ್ರೇಷ್ಠ ಬ್ಯಾಟ್ಸ್‌ಮನ್‌: ಜಮಾಲ್‌ ಕಲ್ಲಡ್ಕ

ಆರೆಂಜ್‌ ಕ್ಯಾಪ್‌: ಸಿಯಾಬ್‌ ಪಟ್ನ

ಶ್ರೇಷ್ಠ ಬೌಲರ್‌: ಸಾಬಿತ್‌ ಕುಂಬ್ರ

ಪರ್ಪಲ್‌ ಕ್ಯಾಪ್‌: ಅಲ್ಫಾನ್‌ ಅಹ್ಮದ್‌

ಶ್ರೇಷ್ಠ ಕ್ಯಾಚ್‌: ಸರ್ಫು ವಳಾಲ್‌

ಶ್ರೇಷ್ಠ ಫೀಲ್ಡರ್‌: ಶರೀಫ್ ಕಡಬ

ಶ್ರೇಷ್ಠ ವಿಕೆಟ್‌ ಕೀಪರ್‌: ತನ್ಸೀಫ್‌ ಬಿ.ಎಂ.

ಫೈನಲ್‌ನ ಪಂದ್ಯಶ್ರೇಷ್ಠ: ಸಾಬಿತ್‌ ಕುಂಬ್ರ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬಾಂಗ್ಲಾ ಬೆಂಬಲಿಸಲು ಹೋಗಿ ಹಳ್ಳಕ್ಕೆ ಬೀಳುತ್ತಾ ಪಾಕಿಸ್ತಾನ?
ನ್ಯೂಜಿಲೆಂಡ್‌ ವಿರುದ್ಧ ಗೆಲುವಿನ ಓಟ ಮುಂದುವರಿಸುತ್ತಾ ಟೀಂ ಇಂಡಿಯಾ?