ಪರ್ತ್: ನ.22ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಬೌನ್ಸಿ ಪಿಚ್‌ನೊಂದಿಗೆ ಸ್ವಾಗತಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸುತ್ತಿದೆ. ಇಲ್ಲಿನ ಓಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಹೆಚ್ಚು ವೇಗ ಹಾಗೂ ಬೌನ್ಸ್ ಇರಲಿರುವ ಪಿಚ್ ಸಿದ್ಧಗೊಳಿಸಲಾಗುತ್ತಿದೆ ಎಂದು ಪಿಚ್ ಕ್ಯುರೇಟರ್ ಎಚ್ಚರಿಸಿದ್ದಾರೆ.
ಮೊದಲ ಟೆಸ್ಟ್‌ಗೆ ಭಾರತ ತಂಡ ಯಾವುದೇ ಅಭ್ಯಾಸ ಪಂದ್ಯವನ್ನಾಡದೆ ಕಾಲಿಡಲಿದೆ. ತಂಡದೊಳಗೇ ಒಂದು ಅಭ್ಯಾಸ ಪಂದ್ಯವನ್ನು ನಿಗದಿಪಡಿಸಲಾಗಿತ್ತಾದರೂ, ಪ್ರಧಾನ ಕೋಚ್ ಗೌತಮ್ ಗಂಭೀರ್ ನೇತೃತ್ವದ ತಂಡದ ಆಡಳಿತ ಅದನ್ನು ರದ್ದುಗೊಳಿಸಿ, ನೆಟ್ಸ್ ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಲು ನಿಧರಿಸಿತು.ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಸೋಮವಾರ ಪರ್ತ್ ತಲುಪಿದ್ದ ಭಾರತೀಯ ಆಟಗಾರರು, ಮಂಗಳವಾರ ಬೆಳಗ್ಗೆಯೇ ಅಭ್ಯಾಸ ಆರಂಭಿಸಿದರು. ಓಪ್ಟಸ್ ಕ್ರೀಡಾಂಗಣದ ಹತ್ತಿರದಲ್ಲೇ ಇರುವ ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ (ವಾಕಾ) ಕ್ರೀಡಾಂಗಣದಲ್ಲಿ ಭಾರತ ತಂಡ ಅಭ್ಯಾಸ ನಡೆಸುತ್ತಿದೆ. ಓಪ್ಟಸ್ ಪಿಚ್ ಸಹ ವಾಕಾ ಪಿಚ್ ರೀತಿಯೇ ಹೆಚ್ಚು ಬೌನ್ಸ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.ಆಸ್ಟ್ರೇಲಿಯಾದ ಪತ್ರಿಕೆಗಳಲ್ಲಿ ಕೊಹ್ಲಿಯದ್ದೇ ಕಾರುಬಾರು!ಪರ್ತ್: ಭಾರತ-ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸರಣಿಗೆ ಆಸ್ಟ್ರೇಲಿಯಾದ ಸುದ್ದಿ ಪತ್ರಿಕೆಗಳು ದೊಡ್ಡ ಪ್ರಚಾರ ನೀಡುತ್ತಿವೆ. ಆ ದೇಶದ ಬಹುತೇಕ ಪತ್ರಿಕೆಗಳಲ್ಲಿ ವಿರಾಟ್ ಕೊಹ್ಲಿಯನ್ನು ಕೊಂಡಾಡಿ ಬರೆಯಲಾಗಿದೆ. ಪ್ರತಿಷ್ಠಿತ ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಕೊಹ್ಲಿಯ ದೊಡ್ಡ ಪೋಸ್ಟರ್ ಜೊತೆಗೆ ಹಿಂದಿ ಭಾಷೆಯಲ್ಲಿ ‘ಇದು ಯುಗಗಳ ಹೋರಾಟ’ ಎಂಬ ಶೀರ್ಷಿಕೆ ಅಡಿ ಸುದ್ದಿ ಪ್ರಕಟಿಸಲಾಗಿದೆ. ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ಇದು ಬಹುತೇಕ ಕೊನೆಯ ಸರಣಿ ಆಗಬಹುದು ಎನ್ನುವ ಕಾರಣಕ್ಕೆ, ‘ರನ್ ಮಷಿನ್’ ಕೊಹ್ಲಿಯೇ ಈ ಸರಣಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ವಿಶ್ಲೇಷಿಸಿವೆ.