ಪ್ರೊ ಕಬಡ್ಡಿ: ಜೈಪುರ, ಯು ಮುಂಬಾಗೆ ಗೆಲುವು

KannadaprabhaNewsNetwork |  
Published : Nov 06, 2024, 12:43 AM IST
ದಬಾಂಗ್‌ ಡೆಲ್ಲಿ ವಿರುದ್ಧ ಗೆಲುವಿನ ನಗೆ ಬೀರಿದ ಯು ಮುಂಬಾ ತಂಡ.  | Kannada Prabha

ಸಾರಾಂಶ

ಯು.ಪಿ.ಯೋಧಾಸ್‌ ವಿರುದ್ಧ ಗೆದ್ದ ಜೈಪುರ ಪಿಂಕ್‌ ಪ್ಯಾಂಥರ್ಸ್‌. ಆಶು ಮಲಿಕ್‌ 11 ಅಂಕಗಳ ಸಾಹಸದ ಹೊರತಾಗಿಯೂ ಯು ಮುಂಬಾಗೆ ಶರಣಾದ ದಬಾಂಗ್‌ ಡೆಲ್ಲಿ.

ಹೈದರಾಬಾದ್‌: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಯು ಮುಂಬಾ ತಂಡಗಳು ಜಯದ ಲಯ ಕಂಡುಕೊಂಡಿವೆ. ಮಂಗಳವಾರ ನಡೆದ ಯು.ಪಿ.ಯೋಧಾಸ್‌ ವಿರುದ್ಧದ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ 33-30 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ರೈಡರ್‌ ನೀರಜ್‌ ನರ್ವಾಲ್‌ 9 ಅಂಕ ಕಲೆಹಾಕಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭರತ್‌ ಹೂಡಾ ಅವರ 7 ಅಂಕಗಳ ಹೋರಾಟ ಯೋಧಾಸ್‌ ಗೆಲುವಿಗೆ ಸಾಕಾಗಲಿಲ್ಲ.

ದಿನದ 2ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ ಯು ಮುಂಬಾ 32-26 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಮನ್‌ಜೀತ್‌ 9 ರೈಡ್‌ ಅಂಕ ಕಲೆಹಾಕಿ, ಮುಂಬಾ ಗೆಲುವಿಗೆ ಸಹಕರಿಸಿದರು. ಡೆಲ್ಲಿಯ ನಾಯಕ ಆಶು ಮಲಿಕ್‌ 11 ಅಂಕ ಗಳಿಸಿದರೂ, ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿಬರದ ಹಿನ್ನೆಲೆಯಲ್ಲಿ ತಂಡಕ್ಕೆ ಸೋಲಾಯಿತು.ಇಂದಿನ ಪಂದ್ಯಗಳು: ಪಾಟ್ನಾ-ಮುಂಬಾ, ರಾತ್ರಿ 8ಕ್ಕೆ, ತಲೈವಾಸ್‌-ಟೈಟಾನ್ಸ್‌, ರಾತ್ರಿ 9ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!