ಮುಂಬೈ: ಕೊನೆ 5 ನಿಮಿಷಗಳಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 5ನೇ ಗೆಲುವು ಸಾಧಿಸಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಸೋಮವಾರ ಪಾಟ್ನಾ ಪೈರೇಟ್ಸ್ ವಿರುದ್ಧ ಬುಲ್ಸ್‌ಗೆ 35-33 ಅಂಕಗಳ ರೋಚಕ ಗೆಲುವು ಲಭಿಸಿತು. ತಂಡ 12 ಪಂದ್ಯಗಳಲ್ಲಿ 5 ಜಯ, 7 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 00ನೇ ಸ್ಥಾನದಲ್ಲಿದೆ. ಅತ್ತ ಪಾಟ್ನಾ 11ರಲ್ಲಿ 6ನೇ ಸೋಲನುಭವಿಸಿತು.
ಬುಲ್ಸ್ ಪರ ಸಚಿನ್ ನರ್ವಾಲ್ ರೈಡಿಂಗ್‌ನಲ್ಲಿ 9 ಅಂಕ ಪಡೆದು ಮಿಂಚಿದರೆ, ಡಿಪೆಂಡರ್ ಸುರ್ಜಿತ್ 8 ಅಂಕ ಗಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಮುಂಬಾ ವಿರುದ್ಧ
ಡೆಲ್ಲಿಗೆ ಗೆಲುವು
ಸೋಮವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್ ಡೆಲ್ಲಿ ತಂಡ 40-34 ಅಂಕಗಳಿಂದ ಗೆಲುವು ಸಾಧಿಸಿತು. ತವರಿನಲ್ಲಿ ಯು ಮುಂಬಾ ಸತತ ಎರಡನೇ ಸೋಲನಭವಿಸಿತು. ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿ 40 ಅಂಕ ಸಂಪಾದಿಸಿರುವ ಡೆಲ್ಲಿ ಅಂಕಪಟ್ಟಿಯಲ್ಲಿ 2 ಸ್ಥಾನದಲ್ಲಿದೆ. ಯು ಮುಂಬಾ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 4ರಲ್ಲಿ ಪರಾಭವಗೊಂಡಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.-
ಇಂದಿನ ಪಂದ್ಯಗಳುತೆಲುಗು ಟೈಟಾನ್ಸ್-ಬೆಂಗಾಲ್ ವಾರಿಯರ್ಸ್, ರಾತ್ರಿ 8ಕ್ಕೆ