ಇಂದಿನಿಂದ ಪ್ರೊ ಕಬಡ್ಡಿ ಪ್ಲೇ-ಆಫ್ ಫೈಟ್‌

KannadaprabhaNewsNetwork |  
Published : Feb 26, 2024, 01:31 AM ISTUpdated : Feb 26, 2024, 12:32 PM IST
ಇಂದಿನಿಂದ ಪ್ರೊ ಕಬಡ್ಡಿ ಪ್ಲೇ-ಆಫ್ ಫೈಟ್‌ | Kannada Prabha

ಸಾರಾಂಶ

12 ವಾರಗಳ ರೋಚಕ ಪಂದ್ಯಗಳ ಬಳಿಕ ಲೀಗ್‌ ಹಂತದಲ್ಲಿ ಅಗ್ರ 6 ಸ್ಥಾನ ಪಡೆದ ತಂಡಗಳು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಫ್‌ನಲ್ಲಿ ಹೋರಾಟ ಮಾಡಲು ಸಿದ್ಧವಾಗಿದೆ.

ಹೈದರಾಬಾದ್‌: 12 ವಾರಗಳ ರೋಚಕ ಪಂದ್ಯಗಳ ಬಳಿಕ ಲೀಗ್‌ ಹಂತದಲ್ಲಿ ಅಗ್ರ 6 ಸ್ಥಾನ ಪಡೆದ ತಂಡಗಳು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಫ್‌ನಲ್ಲಿ ಹೋರಾಟ ಮಾಡಲು ಸಿದ್ಧವಾಗಿದೆ. 

ಹೈದರಾಬಾದ್‌ನಲ್ಲಿ ಫೆ.26ರಿಂದ ನಾಕೌಟ್‌ ಪಂದ್ಯಗಳು ನಡೆಯಲಿವೆ.ಸೋಮವಾರ ಗಚ್ಚಿಬೌಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ಎಲಿಮಿನೇಟರ್‌ ಪಂದ್ಯಗಳು ಆಯೋಜನೆಗೊಳ್ಳಲಿವೆ. 

ಲೀಗ್‌ ಹಂತದ ಮುಕ್ತಾಯಕ್ಕೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ದಬಾಂಗ್ ಡೆಲ್ಲಿ ಹಾಗೂ 6ನೇ ಸ್ಥಾನ ಪಡೆದ ಪಾಟ್ನಾ ಪೈರೇಟ್ಸ್‌ ತಂಡಗಳು ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. 

ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ಗುಜರಾತ್‌ ಜೈಂಟ್ಸ್‌ ಹಾಗೂ 5ನೇ ಸ್ಥಾನ ಪಡೆದ ಹರ್ಯಾಣ ಸ್ಟೀಲರ್ಸ್‌ ತಂಡಗಳು ಎಲಿಮಿಟೇನರ್‌-2 ಪಂದ್ಯದಲ್ಲಿ ಕಾದಾಟ ನಡೆಸಲಿವೆ. 

ಎಲ್ಲಾ ನಾಲ್ಕು ತಂಡಗಳು ಫೆ.28ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಪರಸ್ಪರ ಪೈಪೋಟಿ ನಡೆಸಲಿವೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಪುಣೇರಿ ಪಲ್ಟನ್ ಮತ್ತು 2ನೇ ಸ್ಥಾನ ಪಡೆದುಕೊಂಡಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಗಳು ಈಗಾಗಲೇ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. 

ಪುಣೆ ತಂಡವು ಸೆಮಿಫೈನಲ್‌ನಲ್ಲಿ ಎಲಿಮಿನೇಟರ್‌-1ರ ವಿಜೇತ ತಂಡವನ್ನು ಎದುರಿಸಲಿದ್ದು, ಹಾಲಿ ಚಾಂಪಿಯನ್‌ ಜೈಪುರ ತಂಡ ನಾಲ್ಕರ ಘಟ್ಟದಲ್ಲಿ ಎಲಿಮಿನೇಟರ್‌-2ರ ವಿಜೇತ ತಂಡವನ್ನು ಎದುರಿಸಲಿದೆ. 

ಈ ಲೀಗ್‌ನ ಗ್ರ್ಯಾಂಡ್‌ ಫಿನಾಲೆ ಮಾರ್ಚ್‌ 1ರ ಶುಕ್ರವಾರ ನಡೆಯಲಿದೆ.

ಪಂದ್ಯಗಳ ಸಮಯ: ಎಲಿಮಿನೇಟರ್ 1: ದಬಾಂಗ್ ಡೆಲ್ಲಿ vs ಪಾಟ್ನಾ ಪೈರೇಟ್ಸ್- ರಾತ್ರಿ 8 ಗಂಟೆಗೆಎಲಿಮಿನೇಟರ್ 2: ಗುಜರಾತ್ ಜೈಂಟ್ಸ್ vs ಹರ್ಯಾಣ ಸ್ಟೀಲರ್ಸ್- ರಾತ್ರಿ 9 ಗಂಟೆಗೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ+ ಹಾಟ್‌ಸ್ಟಾರ್‌

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ