ಪ್ರೊ ಕಬಡ್ಡಿ: ಕೊನೆಗೂ ಗೆದ್ದ ಟೈಟಾನ್ಸ್‌

KannadaprabhaNewsNetwork |  
Published : Jan 21, 2024, 01:31 AM IST
ಟೈಟಾನ್ಸ್‌ | Kannada Prabha

ಸಾರಾಂಶ

ಯುಪಿ ಯೋಧಾಸ್‌ ವಿರುದ್ಧ ತೆಲುಗು ಟೈಟಾನ್ಸ್‌ 49-32 ಅಂಕದ ಜಯ ಗಳಿಸಿದೆ. 12 ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ಟೈಟಾನ್ಸ್‌ ಕೊನೆಗೂ ಗೆಲುವಿನ ಹಳಿಗೆ ಮರಳಿದೆ.

ಹೈದರಾಬಾದ್‌: ಸತತ 7 ಹಾಗೂ ಒಟ್ಟಾರೆ 12 ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ಟೈಟಾನ್ಸ್‌ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಈಗಾಗಲೇ ಪ್ಲೇ-ಆಫ್‌ ಕನಸನ್ನು ಬಹುತೇಕ ಭಗ್ನಗೊಳಿಸಿರುವ ಟೈಟಾನ್ಸ್, ಶನಿವಾರ ಯುಪಿ ಯೋಧಾಸ್ ವಿರುದ್ಧ 49-32 ಅಂಕಗಳಿಂದ ಜಯಗಳಿಸಿತು. ತಂಡಕ್ಕಿದು 14 ಪಂದ್ಯಗಳಲ್ಲಿ 2ನೇ ಗೆಲುವು. ಅತ್ತ ಯೋಧಾಸ್‌ 15ರಲ್ಲಿ 11ನೇ ಸೋಲನುಭವಿಸಿತು.ಆರಂಭದಲ್ಲೇ ಪವನ್‌ ಶೆರಾವತ್‌ರ ಆಕರ್ಷಕ ರೈಡಿಂಗ್‌ ಟೈಟಾನ್ಸ್‌ ಮುನ್ನಡೆಗೆ ಕಾರಣವಾಯಿತು. ಮೊದಲಾರ್ಧದಲ್ಲಿ ತಂಡ 24-16ರಿಂದ ಮುನ್ನಡೆಯಲ್ಲಿತ್ತು. ಆ ಬಳಿಕವೂ ಪ್ರಾಬಲ್ಯ ಮುಂದುವರಿಸಿದ ಟೈಟಾನ್ಸ್‌ ಅಧಿಕಾರಯುತ ಗೆಲುವು ಸಾಧಿಸಿತು. ಪವನ್‌ 16 ಅಂಕ ಗಳಿಸಿದರು. ಪ್ರದೀಪ್ ನರ್ವಾಲ್‌(10) ವೈಫಲ್ಯ ತಂಡಕ್ಕೆ ಹಿನ್ನಡೆಯಾಯಿತು.ಶನಿವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್‌ ಡೆಲ್ಲಿ 39-33 ಅಂಕಗಳ ಗೆಲುವು ಸಾಧಿಸಿತು.---ಇಂದಿನ ಪಂದ್ಯಗಳುಬೆಂಗಳೂರು-ತಮಿಳ್‌ ತಲೈವಾಸ್‌, ರಾತ್ರಿ 8ಕ್ಕೆಗುಜರಾತ್‌-ಪುಣೇರಿ ಪಲ್ಟನ್‌, ರಾತ್ರಿ 9ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ