ಕಲ್ಲಿಕೋಟೆ: ಮರ್ಕಝ್‌ ಕನ್ನಡಿಗ ವಿದ್ಯಾರ್ಥಿ ಸಂಘದಿಂದ ಪೈಗಂಬರ್‌ ಕಾವ್ಯ ಸೆಮಿನಾರ್‌

KannadaprabhaNewsNetwork |  
Published : Oct 14, 2024, 01:33 AM ISTUpdated : Oct 14, 2024, 04:57 AM IST
ಪೈಗಂಬರ್‌ ಕಾವ್ಯ ಸೆಮಿನಾರ್‌ | Kannada Prabha

ಸಾರಾಂಶ

ದಕ್ಷಿಣ ಭಾರತದ ಪೈಗಂಬರ್ ಕಾವ್ಯದ ಸಾರ; ಸಾಹಿತ್ಯಿಕ ವಿಶ್ಲೇಷಣೆ, ಪ್ರಭಾವ ಮತ್ತು ಬೋಧನೆಗಳು' ಎಂಬ ವಿಷಯದಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೆಮಿನಾರ್ ಮಂಡಿಸಿದರು.

ಕಲ್ಲಿಕೋಟೆ: ಪ್ರಸಿದ್ಧ ವಿದ್ಯಾಸಂಸ್ಥೆ ಮರ್ಕಝುಸ್ಸಖಾಫತುನ್ನಿಯಾ ಇದರ ಕನ್ನಡ ವಿದ್ಯಾರ್ಥಿ‌ ಸಂಘಟನೆ ಕೆ.ಎಸ್.ಓ ಹಮ್ಮಿಕೊಂಡ ಗುಲ್ಜಾರೇ ನಅತ್ ಪ್ರೊಫೇಟಿಕ್‌ ಸೆಮಿನಾರ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

 ಕಾರ್ಯಕ್ರಮವನ್ನು ಕೇರಳ ಹಜ್ಜ್ ಸಮಿತಿ ಮುಖ್ಯಸ್ಥ ಸಿ.ಮುಹಮ್ಮದ್ ಫೈಝಿ ಉದ್ಘಾಟಿಸಿದರು. ಮರ್ಕಝ್ ಶರೀಅತ್ ಕಾಲೇಜು ಪ್ರಧಾನ ಮುದರ್ರಿಸ್ ಅಬ್ದುಲ್ಲಾ ಸಖಾಫಿ ಮಲಯಮ್ಮ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತಾಡಿದರು. ''ದಕ್ಷಿಣ ಭಾರತದ ಪೈಗಂಬರ್ ಕಾವ್ಯದ ಸಾರ; ಸಾಹಿತ್ಯಿಕ ವಿಶ್ಲೇಷಣೆ, ಪ್ರಭಾವ ಮತ್ತು ಬೋಧನೆಗಳು'' ಎಂಬ ವಿಷಯದಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೆಮಿನಾರ್ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಓ ಅಧ್ಯಕ್ಷರಾದ ಸಯ್ಯಿದ್ ಫಝಲ್ ಕೊಡಗು ವಹಿಸಿದರು. ಮುಖ್ಯ ಅತಿಥಿಗಳಾಗಿ ಲೇಖಕರಾದ ಇಸ್ಮತ್ ಫಜೀರ್, ಮರ್ಕಝ್ ಪೂರ್ವ‌ ವಿದ್ಯಾರ್ಥಿ ಸಲೀಂ ಮುಈನಿ ಇರುವಂಬಳ್ಳ ಭಾಗವಹಿಸಿದರು. ತಸ್ಲೀಂ ನೂರಾನಿ ಸ್ವಾಗತಿಸಿ, ಸ್ವಬಾಹ್ ಬೆಳ್ಳಾರೆ ವಂದಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಪಾಕ್‌ ಪಂದ್ಯಕ್ಕೆ ಮುನ್ನ ಭಾರತಕ್ಕೆ ನಮೀಬಿಯಾ ವಿರುದ್ಧ ರಿಹರ್ಸಲ್
ಭಾರತ ವಿರುದ್ಧ ಪಂದ್ಯಕ್ಕೆ ಪಾಕ್‌ನ ಮನವೊಲಿಸಿ ಐಸಿಸಿ ಈಗ ನಿರಾಳ : ಭಾರೀ ನಷ್ಟದಿಂದ ಪಾರು