ನಾರ್ವೆ ಚೆಸ್‌ ಕಿರೀಟ ಗೆದ್ದ ಪ್ರಜ್ಞಾನಂದ

Published : Jun 07, 2026, 10:43 AM IST
praggnanandhaa

ಸಾರಾಂಶ

ಪ್ರತಿಷ್ಠಿತ ನಾರ್ವೆ ಚೆಸ್‌ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಚಾಂಪಿಯನ್‌ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೂರ್ನಿಯಲ್ಲಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಓಸ್ಲೊ(ನಾರ್ವೆ): ಪ್ರತಿಷ್ಠಿತ ನಾರ್ವೆ ಚೆಸ್‌ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಚಾಂಪಿಯನ್‌ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೂರ್ನಿಯಲ್ಲಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್‌

ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್‌, ವಿಶ್ವ ನಂ.1 ಮ್ಯಾಗ್ಸನ್‌ ಕಾರ್ಲ್‌ಸನ್‌(2 ಬಾರಿ) ಸೇರಿ ಪ್ರಮುಖರನ್ನು ಸೋಲಿಸಿದ್ದ 20 ವರ್ಷದ ಚೆನ್ನೈ ಆಟಗಾರ ಪ್ರಜ್ಞಾನಂದ, ಶುಕ್ರವಾರ ನಡೆದ ಕೊನೆ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್‌ ಕೀಮರ್‌ ವಿರುದ್ಧ ಗೆಲ್ಲುವ ಮೂಲಕ ಒಟ್ಟು 18 ಅಂಕದೊಂದಿಗೆ ಚಾಂಪಿಯನ್‌ ಎನಿಸಿಕೊಂಡರು. 6 ಆಟಗಾರರ ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಸಾಧಾರಣ ಆಟ ಪ್ರದರ್ಶಿಸಿದರೂ, ಬಳಿಕ ಸತತ ಗೆಲುವಿನೊಂದಿಗೆ ಅಗ್ರಸ್ಥಾನಿಯಾದರು.

ಅದ್ಭುತ ಮೈಲುಗಲ್ಲು

ಈ ಗಮನಾರ್ಹ ಸಾಧನೆಗಾಗಿ ಪ್ರಜ್ಞಾನಂದ ಅವರಿಗೆ ಅಭಿನಂದನೆಗಳು. ಇದು ನಿಜಕ್ಕೂ ಅವರ ನಿರಂತರ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಅದ್ಭುತ ಮೈಲುಗಲ್ಲು. ಅವರ ಭವಿಷ್ಯ ಉಜ್ವಲವಾಗಲಿ.

ನರೇಂದ್ರ ಮೋದಿ, ಪ್ರಧಾನ ಮಂತ್ರಿ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಖುಷಿಯ ಅಲೆಯಲ್ಲಿ ತೇಲಾಡಿದ ಆರ್‌ಸಿಬಿ ಆಟಗಾರರು
ಕೇವಲ 5 ದಿನಗಳಲ್ಲಿ 4 ಹಿಮಾಲಯ ಶಿಖರ ಏರಿದ ‘ಬ್ಯಾಡ್‌ನೀಸ್‌ಗುರು’ ಸಿದ್ಧಾರ್ಥ್ ಉನಿಯಾಲ್‌