ಐಪಿಎಲ್‌: ಪಂಜಾಬ್‌ ಕಿಂಗ್ಸ್‌ ಸವಾಲಿಗೆ ಲಖನೌ ಜೈಂಟ್ಸ್‌ ರೆಡಿ

KannadaprabhaNewsNetwork |  
Published : Mar 30, 2024, 12:49 AM IST
ಮೊದಲ ಗೆಲುವಿಗೆ ತುಡಿಯುತ್ತಿರುವ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸಲಿರುವ ಕನ್ನಡಿಗ ಕೆ.ಎಲ್‌.ರಾಹುಲ್‌.  | Kannada Prabha

ಸಾರಾಂಶ

ಐಪಿಎಲ್‌ನಲ್ಲಿಂದು ರೋಚಕ ಕದನ. ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಸೆಣಸಲಿರುವ ಪಂಜಾಬ್‌ ಕಿಂಗ್ಸ್‌. ಈ ಆವೃತ್ತಿಯಲ್ಲಿ ಮೊದಲ ಜಯಕ್ಕಾಗಿ ತುಡಿಯುತ್ತಿರುವ ಕೆ.ಎಲ್‌.ರಾಹುಲ್‌ ಪಡೆ. ಶಿಖರ್‌ ಧವನ್‌ರ ಪಂಜಾಬ್‌ಗೆ ಮತ್ತೊಂದು ಜಯದ ಗುರಿ.

ಲಖನೌ: ಆಲ್ರೌಂಡರ್‌ಗಳ ಬಲದೊಂದಿಗೆ 17ನೇ ಆವೃತ್ತಿ ಐಪಿಎಲ್‌ನಲ್ಲಿ ಕಣಕ್ಕಿಳಿದರೂ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವ ಲಖನೌ ಸೂಪರ್‌ ಜೈಂಟ್ಸ್‌ ಮೊದಲ ಗೆಲುವಿನ ಕಾತರದಲ್ಲಿದ್ದು, ಶನಿವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಾಡಲಿದೆ. ಆರಂಭಿಕ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪರಾಭವಗೊಂಡಿರುವ ಪಂಜಾಬ್‌ ಕೂಡಾ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಟಿ20 ವಿಶ್ವಕಪ್‌ ದೃಷ್ಟಿಯಲ್ಲಿ ಐಪಿಎಲ್‌ನಲ್ಲಿ ವಿಕೆಟ್ ಕೀಪರ್‌ ಬ್ಯಾಟರ್‌ ಆಗಿಯೇ ಆಡುತ್ತಿರುವ ಲಖನೌ ನಾಯಕ ಕೆ.ಎಲ್‌.ರಾಹುಲ್‌ ತಮ್ಮ ಸ್ಟ್ರೈಕ್‌ರೇಟ್‌ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ಮಾರ್ಕ್‌ ವುಡ್‌, ಡೇವಿಡ್‌ ವಿಲ್ಲಿ ಅನುಪಸ್ಥಿತಿಯಲ್ಲಿ ಲಖನೌ ಬೌಲಿಂಗ್‌ ವಿಭಾಗ ಸೊರಗಿದಂತೆ ಕಾಣುತ್ತಿದೆ. ದೇವದತ್‌ ಪಡಿಕ್ಕಲ್‌, ಆಯುಶ್ ಬದೋನಿ, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆಯಿದ್ದು, ಮಾರ್ಕಸ್‌ ಸ್ಟೋಯ್ನಿಸ್‌ ಅಬ್ಬರಿಸಬೇಕಾದ ಅಗತ್ಯವಿದೆ.ಮತ್ತೊಂದೆಡೆ ಶಿಖರ್‌ ಧವನ್‌ ನಾಯಕತ್ವದ ಪಂಜಾಬ್‌ ವಿದೇಶಿ ತಾರೆಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಸ್ಯಾಮ್‌ ಕರ್ರನ್‌, ಲಿವಿಂಗ್‌ಸ್ಟೋನ್‌, ಕಗಿಸೊ ರಬಾಡ ಜೊತೆ ಜಾನಿ ಬೇರ್‌ಸ್ಟೋವ್‌ ಸುಧಾರಿತ ಪ್ರದರ್ಶನ ನೀಡಬೇಕಿದೆ. ಜಿತೇಶ್‌ ಶರ್ಮಾ, ಪ್ರಭ್‌ಸಿಮ್ರನ್‌, ಶಶಾಂಕ್‌ ಸಿಂಗ್‌ ತಂಡ ತಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಉಳಿಸಿಕೊಂಡರಷ್ಟೇ ಮುಂದಿನ ಪಂದ್ಯಗಳಿಗೆ ಅವಕಾಶ ಸಿಗಲಿದೆ.

ಒಟ್ಟು ಮುಖಾಮುಖಿ: 03ಲಖನೌ: 02

ಪಂಜಾಬ್‌: 01ಸಂಭವನೀಯ ಆಟಗಾರರ ಪಟ್ಟಿಲಖನೌ: ರಾಹುಲ್(ನಾಯಕ), ಡಿ ಕಾಕ್‌, ಪಡಿಕ್ಕಲ್‌, ಬದೋನಿ, ಸ್ಟೋಯ್ನಿಸ್‌, ಪೂರನ್‌, ಕೃನಾಲ್‌, ಬಿಷ್ಣೋಯ್‌, ಮೊಹ್ಸಿನ್‌, ನವೀನ್‌, ಯಶ್‌ ಠಾಕೂರ್‌.

ಪಂಜಾಬ್‌: ಧವನ್‌(ನಾಯಕ), ಬೇರ್‌ಸ್ಟೋವ್‌, ಪ್ರಭ್‌ಸಿಮ್ರನ್, ಲಿವಿಂಗ್‌ಸ್ಟೋನ್‌, ಜಿತೇಶ್, ಕರ್ರನ್‌, ಹರ್‌ಪ್ರೀತ್‌, ಹರ್ಷಲ್‌, ರಬಾಡ, ಅರ್ಶ್‌ದೀಪ್‌, ರಾಹುಲ್‌.ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

PREV

Recommended Stories

ಇಂದಿನಿಂದ ದುಲೀಪ್‌ ಟ್ರೋಫಿ ಫೈನಲ್‌
ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಭರ್ಜರಿ ಅಭ್ಯಾಸ