ನವದೆಹಲಿ: ಐಪಿಎಲ್‌ನ ಭರಾಟೆ ನಡುವೆ ದೇಸಿ ಕ್ರಿಕೆಟ್‌ನತ್ತ ಆಟಗಾರರನ್ನು ಆಕರ್ಷಿಸಲು ಬಿಸಿಸಿಐ ಹೊಸ ಯೋಜನೆ ರೂಪಿಸಿದೆ. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನ ಸಂಭಾವನೆ ಹೆಚ್ಚಿಸಿದ್ದ ಮಂಡಳಿಯು ರಣಜಿ ಟ್ರೋಫಿ ಸಂಭಾವನೆಯನ್ನೂ ಏರಿಸಲು ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ. ಸದ್ಯ ರಣಜಿ ಪಂದ್ಯ ಆಡುವ ಆಟಗಾರನಿಗೆ ಪ್ರತಿ ದಿನಕ್ಕೆ ₹40000 ರಿಂದ ₹60000 ಇರುವ ಸಂಭಾವನೆ ಸಿಗುತ್ತಿದೆ.
ಅಂದರೆ ಆಟಗಾರ ಆವೃತ್ತಿಯಲ್ಲಿ ಗುಂಪು ಹಂತದಲ್ಲಿ 7 ಪಂದ್ಯಗಳನ್ನಾಡಿದರೆ ಅಂದಾಜು ₹11 ಲಕ್ಷ ಸಂಭಾವನೆ ಲಭಿಸಲಿದೆ. ಆದರೆ ಈ ಮೊತ್ತವನ್ನು ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಸ್ವಿಸ್ ಓಪನ್: ಸೆಮೀಸಲ್ಲಿ ಮುಗ್ಗರಿಸಿದ ಶ್ರೀಕಾಂತ್
ಬಸೆಲ್(ಸ್ವಿಜರ್‌ಲೆಂಡ್): ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. 16 ತಿಂಗಳ ಬಳಿಕ ಟೂರ್ನಿಯೊಂದರಲ್ಲಿ ಅಂತಿಮ-4ರ ಘಟ್ಟ ಪ್ರವೇಶಿಸಿದ್ದ ಶ್ರೀಕಾಂತ್ ಆಸೆಗೆ ಚೈನೀಸ್ ತೈಪೆಯ ಚುನ್-ಯೀ ಅಡ್ಡಿಯಾದರು.
ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂತ್ 21-15, 9-21, 18-21 ಗೇಮ್‌ಗಳಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದರು. ಶ್ರೀಕಾಂತ್ ಹೊರಬೀಳುತ್ತಿದ್ದಂತೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.