ವುಮೆನ್ಸ್‌ ಐಪಿಎಲ್‌: ಟ್ರೋಫಿ ಮೇಲೆ ಕಣ್ಣಿಟ್ಟ ಆರ್‌ಸಿಬಿಗೆ ಸತತ 2ನೇ ಪಂದ್ಯದಲ್ಲೂ ಗೆಲುವು

KannadaprabhaNewsNetwork |  
Published : Feb 28, 2024, 02:31 AM IST
ಕನ್ನಡಪ್ರಭ ಚಿತ್ರ | Kannada Prabha

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಜೈಂಟ್ಸ್‌ ಎದುರಿನ ಪಂದ್ಯದಲ್ಲಿ ಬೆಂಗಳೂರಿಗೆ 8 ವಿಕೆಟ್‌ ಜಯ ಲಭಿಸಿತು. ಬೌಲರ್‌ಗಳ ಪರಾಕ್ರಮ, ಬ್ಯಾಟರ್‌ಗಳ ಅಬ್ಬರದಿಂದಾಗಿ ಆರ್‌ಸಿಬಿಗೆ ಸತತ 2ನೇ ಗೆಲುವು ಸಿಕ್ಕಿತು. ಗುಜರಾತ್‌ ಸತತ 2ನೇ ಸೋಲು ಕಂಡಿತು.

ಬೆಂಗಳೂರು: ಬೌಲರ್‌ಗಳ ಮಾರಕ ದಾಳಿ, ಬ್ಯಾಟರ್‌ಗಳು ತೋರಿದ ಅಭೂತಪೂರ್ವ ಪ್ರದರ್ಶನದಿಂದಾಗಿ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಆರ್‌ಸಿಬಿ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಬೆಂಗಳೂರಿಗೆ 8 ವಿಕೆಟ್‌ ಜಯ ಲಭಿಸಿತು. ಟೂರ್ನಿಯಲ್ಲಿ ಗುಜರಾತ್‌ಗೆ ಇದು ಸತತ 2ನೇ ಸೋಲು.ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 7 ವಿಕೆಟ್‌ ಕಳೆದುಕೊಂಡು ಗಳಿಸಿದ್ದು ಕೇವಲ 107 ರನ್‌. ಹೇಮಲತಾ 31, ಹರ್ಲೀನ್‌ ಡಿಯೋಲ್ 22 ರನ್‌ ಗಳಿಸಿದ್ದು ಬಿಟ್ಟರೆ ಇತರರು ಮಿಂಚಲಿಲ್ಲ. ಸೋಫಿ ಮೋಲಿನ್ಯುಕ್ಸ್‌ 25ಕ್ಕೆ 3, ರೇಣುಕಾ ಸಿಂಗ್‌ 14ಕ್ಕೆ 2 ವಿಕೆಟ್‌ ಕಿತ್ತರು.ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 12.3 ಓವರ್‌ಗಳಲ್ಲೇ 2 ವಿಕೆಟ್‌ ಕಳೆದುಕೊಂಡು ಗೆಲುವನ್ನು ತನ್ನದಾಗಿಸಿಕೊಂಡಿತು. ಸೋಫಿ ಡಿವೈನ್‌ 6 ರನ್‌ಗೆ ಔಟಾದ ಬಳಿಕ ಸ್ಮೃತಿ ಮಂಧನಾ 27 ಎಸೆತಗಳಲ್ಲಿ 43 ರನ್‌ ಸಿಡಿಸಿ ತಂಡಕ್ಕೆ ಆದರೆಯಾದರು. ಸ್ಮೃತಿ ಔಟಾದ ಬಳಿಕ ಎಸ್‌.ಮೇಘನಾ(ಔಟಾಗದೆ 36), ಎಲೈಸಿ ಪೆರ್ರಿ(ಔಟಾಗದೆ 23) ತಂಡವನ್ನು ಗೆಲುವಿನ ದಡ ಸೇರಿಸಿದರು.ಇಂದಿನ ಪಂದ್ಯ: ಮುಂಬೈ-ಯುಪಿ ವಾರಿಯರ್ಸ್‌, ರಾತ್ರಿ 7.30ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!