ಮುಂಬೈ ಕೋಚ್‌ ಬೌಷರ್‌ ವಿರುದ್ಧ ರೋಹಿತ್ ಪತ್ನಿ ಆಕ್ರೋಶ

KannadaprabhaNewsNetwork | Updated : Feb 07 2024, 11:36 AM IST

ಸಾರಾಂಶ

ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬದಲಾವಣೆ ಬಗ್ಗೆ ತಂಡದ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ರ ಸ್ಪಷ್ಟೀಕರಣ ಹಾಗೂ ಅದಕ್ಕೆ ರೋಹಿತ್‌ ಶರ್ಮಾ ಪತ್ನಿ ರಿತಿಕಾ ನೀಡಿದ ಪ್ರತಿಕ್ರಿಯೆ ಸದ್ಯ ಗೊಂದಲ ಹೆಚ್ಚಿಸಿದೆ.

ಮುಂಬೈ: ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬದಲಾವಣೆ ಬಗ್ಗೆ ತಂಡದ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ರ ಸ್ಪಷ್ಟೀಕರಣ ಹಾಗೂ ಅದಕ್ಕೆ ರೋಹಿತ್‌ ಶರ್ಮಾ ಪತ್ನಿ ರಿತಿಕಾ ನೀಡಿದ ಪ್ರತಿಕ್ರಿಯೆ ಸದ್ಯ ಗೊಂದಲ ಹೆಚ್ಚಿಸಿದೆ.

‘ರೋಹಿತ್‌ರನ್ನು ಕೆಳಗಿಳಿಸಿದ್ದು ಕೇವಲ ಕ್ರಿಕೆಟ್‌ ನಿರ್ಧಾರ. ಈ ಬಾರಿ ರೋಹಿತ್‌ಗೆ ನಾಯಕತ್ವದ ಒತ್ತಡವಿಲ್ಲದೆ ಆಡಬಹುದು. ಅಲ್ಲದೆ ಹಾರ್ದಿಕ್‌ ಪಾಂಡ್ಯ ಮೊದಲ ಯತ್ನದಲ್ಲೇ ಗುಜರಾತನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. 

ಹೀಗಾಗಿ ಪಾಂಡ್ಯರನ್ನು ಕರೆತರಲು ನಾವು ಕೂಡ ಎದುರು ನೋಡುತ್ತಿದ್ದೆವು. ಹೀಗೆ ಸಿಕ್ಕ ಅವಕಾಶ ಬಳಸಿಕೊಂಡಿದ್ದೇವೆ’ ಎಂದು ಸಂದರ್ಶನವೊಂದರಲ್ಲಿ ಸೋಮವಾರ ತಿಳಿಸಿದ್ದರು. 

ಇದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ರಿತಿಕಾ, ‘ಇದರಲ್ಲಿ(ಬೌಷರ್‌ ಹೇಳಿಕೆ) ಹಲವು ತಪ್ಪು ಮಾಹಿತಿಗಳಿವೆ’ ಎಂದಿದ್ದಾರೆ. ರಿತಿಕಾ ಹೇಳಿಕೆ ಕ್ರಿಕೆಟ್‌ ಅಭಿಮಾನಿಗಳ ನಡುವೆ ಕುತೂಹಲ, ಊಹಾಪೋಹಗಳಿಗೆ ಕಾರಣವಾಗಿದೆ.

Share this article