ದುಬೈ: 2023ರ ಶ್ರೇಷ್ಠ ಏಕದಿನ ತಂಡವನ್ನು ಮಂಗಳವಾರ ಐಸಿಸಿ ಪ್ರಕಟಿಸಿದ್ದು, ಭಾರತವನ್ನು ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ಗೇರಿಸಿದ್ದ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದಾರೆ.
ವರ್ಷದಲ್ಲಿ ತಂಡದಲ್ಲಿ ರೋಹಿತ್ ಜೊತೆಗೆ ಇನ್ನೂ ಐವರು ಭಾರತೀಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ತಾರಾ ಬ್ಯಾಟರ್ ವಿರಾಟ್ ಕೊಹ್ಲಿ, ಯುವ ತಾರೆ ಶುಭ್‌ಮನ್ ಗಿಲ್, ವೇಗದ ಬೌಲರ್‌ಗಳಾದ ಮೊಹಮದ್ ಸಿರಾಜ್, ಮೊಹಮದ್ ಶಮಿ, ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡಾ ತಂಡದಲ್ಲಿದ್ದಾರೆ.
ಇದೇ ವೇಳೆ ವರ್ಷದ ಟೆಸ್ಟ್ ತಂಡವನ್ನೂ ಐಸಿಸಿ ಪ್ರಕಟಿಸಿದ್ದು, ಭಾರತದ ತಾರಾ ಆಲ್ರೌಂಡರ್‌ಗಳಾದ ಜಡೇಜಾ ಹಾಗೂ ಆರ್.ಅಶ್ವಿನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಪ್ಯಾಟ್ ಕಮಿನ್ಸ್ ಐಸಿಸಿ ತಂಡಕ್ಕೂ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ ವರ್ಷದ ಮಹಿಳಾ ಏಕದಿನ ತಂಡದಲ್ಲಿ ಯಾವುದೇ ಭಾರತೀಯರಿಲ್ಲ.
ವರ್ಷದ ಏಕದಿನ ತಂಡ: ರೋಹಿತ್(ನಾಯಕ), ಶುಭ್‌ಮನ್ ಗಿಲ್, ಟ್ರ್ಯಾವಿಸ್ ಹೆಡ್, ವಿರಾಟ್ ಕೊಹ್ಲಿ, ಡ್ಯಾರಿಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಯಾನ್ಸನ್, ಆ್ಯಡಂ ಜಂಪಾ, ಮೊಹಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮದ್ ಶಮಿ.
ವರ್ಷದ ಟೆಸ್ಟ್ ತಂಡ: ಉಸ್ಮಾನ್ ಖವಾಜ, ಕರುಣಾರತ್ನೆ, ಕೇನ್ ವಿಲಿಯಮ್ಸನ್, ಜೋ ರೂಟ್, ರವೀಂದ್ರ ಜಡೇಜಾ, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್(ನಾಯಕ), ಆರ್.ಅಶ್ವಿನ್, ಮಿಚೆಲ್ ಸ್ಟಾರ್ಕ್, ಸ್ಟುವರ್ಟ್ ಬ್ರಾಡ್.