ಚೊಚ್ಚಲ ಬಾರಿ ಫೈನಲ್‌ಗೇರುವ ದ.ಆಫ್ರಿಕಾ vs ಆಫ್ಘನ್ ಫೈಟ್‌

KannadaprabhaNewsNetwork |  
Published : Jun 27, 2024, 01:09 AM ISTUpdated : Jun 27, 2024, 04:16 AM IST
ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ | Kannada Prabha

ಸಾರಾಂಶ

‘ಚೋಕರ್ಸ್‌’ ಹಣೆಪಟ್ಟಿ ಹೊತ್ತುಕೊಂಡೇ ಇರುವ ದ.ಆಫ್ರಿಕಾ ಐಸಿಸಿ ಟೂರ್ನಿಗಳ ಸೆಮಿಫೈನಲ್‌ನ ಕಳಪೆ ಇತಿಹಾಸವನ್ನು ಈ ಬಾರಿ ಅಳಿಸಿ ಹಾಕಲು ಕಾಯುತ್ತಿದೆ. ಇದಕ್ಕೂ ಮುನ್ನ 2 ಬಾರಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲೂ ದ.ಆಫ್ರಿಕಾ ಸೋತಿದೆ.

ಟ್ರಿನಿಡಾಡ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುತ್ತವೆ ಎಂದು ಹೆಚ್ಚೇನೂ ನಿರೀಕ್ಷೆ ಇಟ್ಟುಕೊಂಡಿರದ 2 ತಂಡಗಳಾದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ಬುಧವಾರ ಮೊದಲ ಸೆಮಿಫೈನಲ್‌ನಲ್ಲಿ ಪರಸ್ಪರ ಸೆಣಸಾಡಲಿದೆ. 

ಬಲಾಡ್ಯ ತಂಡಗಳನ್ನು ಮಣ್ಣುಮುಕ್ಕಿಸಿ ಉಪಾಂತ್ಯಕ್ಕೇರಿರುವ ತಂಡಗಳು ಚೊಚ್ಚಲ ಬಾರಿ ಫೈನಲ್‌ಗೇರಲು ಕಾಯುತ್ತಿವೆವಿಶ್ವದ ಬಲಿಷ್ಠ ತಂಡಗಳ ಸಾಲಿನಲ್ಲಿ ಗುರುತಿಸಿಕೊಂಡರೂ ಈ ವರೆಗೂ ‘ಚೋಕರ್ಸ್‌’ ಹಣೆಪಟ್ಟಿ ಹೊತ್ತುಕೊಂಡೇ ಇರುವ ದ.ಆಫ್ರಿಕಾ ಐಸಿಸಿ ಟೂರ್ನಿಗಳ ಸೆಮಿಫೈನಲ್‌ನ ಕಳಪೆ ಇತಿಹಾಸವನ್ನು ಈ ಬಾರಿ ಅಳಿಸಿ ಹಾಕಲು ಕಾಯುತ್ತಿದೆ. ತಂಡ ಇದಕ್ಕೂ ಮುನ್ನ 2 ಬಾರಿ ಟಿ20 ವಿಶ್ವಕಪ್‌ ಸೆಮಿಫೈನಲ್‌ ಆಡಿದ್ದು, 2 ಬಾರಿಯೂ ಫೈನಲ್‌ಗೇರಲು ವಿಫಲವಾಗಿದೆ.ತಾರಾ ಬ್ಯಾಟರ್‌ಗಳಾದ ಡಿ ಕಾಕ್‌, ಮಿಲ್ಲರ್‌, ಕ್ಲಾಸೆನ್‌, ನಾಯಕ ಮಾರ್ಕ್‌ರಮ್‌, ಟ್ರಿಸ್ಟನ್‌ ಸ್ಟಬ್ಸ್‌ ನಿರ್ಣಾಯಕ ಪಂದ್ಯದಲ್ಲಿ ತಂಡದ ಕೈ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. 

ರಬಾಡ, ನೋಕಿಯಾ, ಯಾನ್ಸನ್‌ ವೇಗದ ಬೌಲಿಂಗ್‌ ಆಧಾರಸ್ತಂಭಗಳಾಗಿದ್ದು, ತಜ್ರೇಜ್‌ ಶಮ್ಸಿ ಮತ್ತೊಮ್ಮೆ ಸ್ಪಿನ್ ಕೈಚಳಕ ತೋರಿಸುವ ಕಾತರದಲ್ಲಿದ್ದಾರೆ.ಮತ್ತೊಂದೆಡೆ ಗುಂಪು ಹಂತದಲ್ಲಿ ನ್ಯೂಜಿಲೆಂಡ್‌, ಸೂಪರ್-8ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಸೆಮೀಸ್‌ಗೇರಿರುವ ಆಫ್ಘನ್‌, ಹೊಸ ಚರಿತ್ರೆ ಸೃಷ್ಟಿಸಿದ ಹುಮ್ಮಸ್ಸಿನಲ್ಲಿದೆ. ಟಿ20ಯಲ್ಲಿ ಅಪಾಯಕಾರಿ ತಂಡ ಎನಿಸಿಕೊಂಡಿರುವ ಆಫ್ಘನ್‌, ಆಲ್ರೌಂಡ್‌ ಪ್ರದರ್ಶನದ ಮೂಲಕವೇ ಗಮನಸೆಳೆದಿದೆ. ಗುರ್ಬಾಜ್‌, ಜದ್ರಾನ್‌ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ತಂಡವನ್ನು ಚೊಚ್ಚಲ ಬಾರಿ ಐಸಿಸಿ ಟೂರ್ನಿಯ ಫೈನಲ್‌ಗೇರಿರುವ ಕಾತರದಲ್ಲಿದ್ದಾರೆ. ರಶೀದ್‌, ನಬಿ, ಗುಲ್ಬದಿನ್‌ ನೈಬ್‌ ಆಲ್ರೌಂಡ್‌ ಆಟ, ಫಾರೂಖಿ, ನವೀನ್‌, ನೂರ್‌ ಅಹ್ಮದ್‌ ಬೌಲಿಂಗ್‌ ಪ್ರದರ್ಶನ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ.

ಒಟ್ಟು ಮುಖಾಮುಖಿ: 02ದ.ಆಫ್ರಿಕಾ: 02ಅಫ್ಘಾನಿಸ್ತಾನ: 00

ಸಂಭವನೀಯ ಆಟಗಾರರ ಪಟ್ಟಿ

ದ.ಆಫ್ರಿಕಾ: ಡಿ ಕಾಕ್‌, ಹೆಂಡ್ರಿಕ್ಸ್‌, ಮಾರ್ಕ್‌ರಮ್‌(ನಾಯಕ), ಸ್ಟಬ್ಸ್‌, ಕ್ಲಾಸೆನ್‌, ಮಿಲ್ಲರ್‌, ಯಾನ್ಸನ್‌, ಮಹಾರಾಜ, ರಬಾಡ, ಶಮ್ಸಿ, ನೋಕಿಯಾ.ಅಫ್ಘಾನಿಸ್ತಾನ: ಗುರ್ಬಾಜ್‌, ಜದ್ರಾನ್‌, ಅಜ್ಮತುಲ್ಲಾ, ಕರೀಂ, ರಶೀದ್‌(ನಾಯಕ), ನಬಿ, ಗುಲ್ಬದಿನ್, ಖರೋಟೆ, ನೂರ್, ನವೀನ್‌, ಫಾರೂಖಿ.

ಪಂದ್ಯ: ಬೆಳಗ್ಗೆ 6 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌: ಟ್ರಿನಿಡಾಡ್‌ ಕ್ರೀಡಾಂಗಣದ ಪಿಚ್‌ ಲೋ ಸ್ಕೋರ್‌ ಪಂದ್ಯಗಳಿಗೆ ಹೆಸರುವಾಸಿ. ಇದು ನಿಧಾನಗತಿ ಪಿಚ್‌ ಆಗಿದ್ದು, ಬೌಲರ್‌ಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ. ಇಲ್ಲಿ ವಿಶ್ವಕಪ್‌ನ ಕಳೆದ 3 ಪಂದ್ಯಗಳ ಮೊದಲ ಇನ್ನಿಂಗ್ಸ್ ಸ್ಕೋರ್‌ 95, 40 ಮತ್ತು 78.

ಮಳೆರಾಯ ಅಡ್ಡಿಪಡಿಸಿದರೆ ಪಂದ್ಯ ನಾಳೆಗೆ ಮುಂದೂಡಿಕೆ

ಟ್ರಿನಿಡಾಟ್‌ನಲ್ಲೂ ಮಳೆ ಮುನ್ಸೂಚನೆ ಇದ್ದು, ಆಫ್ಘನ್‌ ಹಾಗೂ ದ.ಆಫ್ರಿಕಾ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ. ಒಂದು ವೇಳೆ ಪಂದ್ಯಕ್ಕೆ ಅಡಚಣೆ ಉಂಟಾದರೆ ಪಂದ್ಯ ಮುಕ್ತಾಯಗೊಳಿಸಲು ಬುಧವಾರ ಹೆಚ್ಚುವರಿ 60 ನಿಮಿಷಗಳ ಕಾಲಾವಕಾಶ ಸಿಗಲಿದೆ. ಈ ಸಮಯದಲ್ಲೂ ತಲಾ 10 ಓವರ್‌ ಆಟ ಸಾಧ್ಯವಾಗದೇ ಇದ್ದರೆ ಪಂದ್ಯ ಮೀಸಲು ದಿನವಾದ ಗುರುವಾರ ಪಂದ್ಯ ಮುಂದುವರಿಯಲಿದೆ.

ವಿಶ್ವಕಪ್‌ನ 7 ಸೆಮೀಸ್‌ಗಳಲ್ಲಿ ಒಮ್ಮೆಯೂ ಗೆದ್ದಿಲ್ಲ ದ.ಆಫ್ರಿಕಾ!

ದ.ಆಫ್ರಿಕಾ ಐಸಿಸಿ ವಿಶ್ವಕಪ್‌(ಟಿ20 ಹಾಗೂ ಏಕದಿನ)ಗಳಲ್ಲಿ ಈ ವರೆಗೂ 7 ಬಾರಿ ಸೆಮಿಫೈನಲ್‌ನಲ್ಲಿ ಆಡಿದೆ. ಆದರೆ ಒಮ್ಮೆ ಕೂಡಾ ಗೆಲುವು ಸಾಧಿಸಿಲ್ಲ. ಏಕದಿನ ವಿಶ್ವಕಪ್‌ನಲ್ಲಿ 1992, 1999, 2007, 2015 ಹಾಗೂ 2023ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿದೆ. ಟಿ20 ವಿಶ್ವಕಪ್‌ನಲ್ಲಿ 2009, 2014ರಲ್ಲಿ ಉಪಾಂತ್ಯ ಪ್ರವೇಶಿಸಿದ್ದರೂ, ಫೈನಲ್‌ಗೇರಲು ವಿಫಲವಾಗಿತ್ತು. ಇನ್ನು, ಆಫ್ಘನ್‌ ಇದೇ ಮೊದಲ ಬಾರಿ ಯಾವುದೇ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಆಡುತ್ತಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!