;Resize=(412,232))
ನವದೆಹಲಿ: ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹಾಗೂ ಕುಟುಂಬಸ್ಥರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದು, ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ಮದುವೆಗೆ ಆಹ್ವಾನ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಚಿನ್, ‘ಅರ್ಜುನ್-ಸಾನಿಯಾ ಮದುವೆಗೆ ಆಗಮಿಸುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದೇವೆ. ಯುವ ಜೋಡಿಗೆ ನಿಮ್ಮ ಆಶೀರ್ವಾದ ಹಾಗೂ ಸಲಹೆಗಳಿಗೆ ಧನ್ಯವಾದಗಳು ಮೋದಿ ಜೀ’ ಎಂದಿದ್ದಾರೆ.
ಅರ್ಜುನ್ ಮಾ.5ರಂದು ಸಾನಿಯಾ ಚಂಡೋಕ್‌ರನ್ನು ವರಿಸಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಕಳೆದ ಆಗಸ್ಟ್‌ನಲ್ಲಿ ನೆರವೇರಿತ್ತು.