ಒಂದು ಓವರಲ್ಲಿ 6 ಸಿಕ್ಸರ್‌ ಸಿಡಿಸಿದ ಸಮೊವಾದ ಡಾರಿಯಸ್‌ ವಿಸ್ಸೆರ್‌!

KannadaprabhaNewsNetwork |  
Published : Aug 21, 2024, 12:32 AM ISTUpdated : Aug 21, 2024, 12:33 AM IST
ಓವರಲ್ಲಿ 6 ಸಿಕ್ಸರ್‌ ಸಿಡಿಸಿದ ಸಮೊವಾ ದೇಶದ ಡೇರಿಯರ್‌ ವಿಸ್ಸೆರ್‌.  | Kannada Prabha

ಸಾರಾಂಶ

ಯುವರಾಜ್‌ ಸಿಂಗ್‌ರ ದಾಖಲೆ ಸರಿಗಟ್ಟಿದ ಡೇರಿಯಸ್‌. ಓವರಲ್ಲಿ 3 ನೋಬಾಲ್‌ ಸೇರಿ 39 ರನ್‌. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ.

ನವದೆಹಲಿ: ಸಮೊವಾ ದೇಶದ ಬ್ಯಾಟರ್‌ ಡಾರಿಯಸ್‌ ವಿಸ್ಸೆರ್‌ ಅಂ.ರಾ.ಟಿ20 ಕ್ರಿಕೆಟ್‌ನ ಓವರ್‌ವೊಂದರಲ್ಲಿ 6 ಸಿಕ್ಸರ್‌ ಸಿಡಿಸಿದ, ಅಪರೂಪದ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ.

ಸಮೊವಾದ ರಾಜಧಾನಿ ಏಪಿಯಾದಲ್ಲಿ ವಾನವಾಟು ವಿರುದ್ಧ ನಡೆದ ಟಿ20 ವಿಶ್ವಕಪ್‌ನ ಪಶ್ಚಿಮ ಏಷ್ಯಾ-ಪೆಸಿಫಿಕ್‌ ಪ್ರಾಂತ್ಯದ ಅರ್ಹತಾ ಪಂದ್ಯದಲ್ಲಿ ಡಾರಿಯಸ್‌ ಈ ಸಾಧನೆಗೈದರು. ವಾನವಾಟು ತಂಡದ ಬೌಲರ್‌ ನಲಿನ್‌ ನಿಪಿಕೊ ಎಸೆದ ಓವರಲ್ಲಿ 6 ಸಿಕ್ಸರ್‌ ಸಿಡಿಸಿದರು. ಅಲ್ಲದೇ ಈ ಓವರಲ್ಲಿ 3 ನೋಬಾಲ್‌ ಸಹ ಇತ್ತು. ಹೀಗಾಗಿ ಓವರಲ್ಲಿ ಒಟ್ಟು 39 ರನ್‌ ದಾಖಲಾಯಿತು. ಅಂ.ರಾ.ಟಿ20ಯಲ್ಲಿ ಓವರ್‌ವೊಂದರಲ್ಲಿ ದಾಖಲಾದ ಅತಿಹೆಚ್ಚು ರನ್‌ಗಳ ದಾಖಲೆ ಇದು. ಯುವರಾಜ್‌, ಪೊಲ್ಲಾರ್ಡ್‌, ದೀಪೇಂದ್ರ ಐರಿ ಅಂ.ರಾ.ಟಿ20 ಪಂದ್ಯದ ಓವರಲ್ಲಿ 6 ಸಿಕ್ಸರ್‌ ಸಿಡಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

103 ಡಿಗ್ರಿ ಜ್ವರದಲ್ಲೂ ಡಬ್ಲ್ಯುಪಿಎಲ್‌ ಫೈನಲ್‌ ಆಡಿದ ಸ್ಮೃತಿ ಮಂಧನಾ!
ಆರ್‌ಸಿಬಿಯ ಮುಕುಟಕ್ಕೆ ಹ್ಯಾಟ್ರಿಕ್‌ ಕಿರೀಟ!