ರಾಜ್‌ಕೋಟ್: ಹಲವು ವರ್ಷಗಳಿಂದ ಭಾರತ ತಂಡಕ್ಕೆ ಪಾದಾರ್ಪಣೆಗೆ ಕಾಯುತ್ತಿದ್ದ ಸರ್ಫರಾಜ್ ಖಾನ್ ಕೊನೆಗೂ ಆಡುವ ಅವಕಾಶ ಪಡೆದುಕೊಂಡರು. ಜೊತೆಗೆ ಚೊಚ್ಚಲ ಇನ್ನಿಂಗ್ಸ್‌ನಲ್ಲೇ ಅತ್ಯಾಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು.
ಜೊತೆಗೆ ಭಾರತದ ಪರ ಪಾದಾರ್ಪಣಾ ಪಂದ್ಯದಲ್ಲೇ 2ನೇ ಅತಿವೇಗದ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು. ಅವರು 48 ಎಸೆತಗಳಲ್ಲಿ ಫಿಫ್ಟಿ ಪೂರೈಸಿದರು.
1934ರಲ್ಲಿ ಯದವೇಂದ್ರ ಸಿಂಗ್ 42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಈ ವರೆಗೂ ದಾಖಲೆಯಾಗಿಯೇ ಉಳಿದಿದೆ. ಇನ್ನು, 2017ರಲ್ಲಿ ಶ್ರೀಲಂಕಾ ವಿರುದ್ಧ ಹಾರ್ದಿಕ್ 48 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದು, ಅದನ್ನು ಸರ್ಫರಾಜ್ ಸರಿಗಟ್ಟಿದರು.
ಸರ್ಫರಾಜ್‌ಗೆ ಟೆಸ್ಟ್ ಕ್ಯಾಪ್: ಭಾವುಕರಾಗಿ ತಂದೆ ಕಣ್ಣೀರು
ಇಂಗ್ಲೆಂಡ್ ವಿರುದ್ಧ 3ನೇ ಪಂದ್ಯಕ್ಕೂ ಮುನ್ನ ಸರ್ಫರಾಜ್ ಖಾನ್‌ಗೆ ಟೆಸ್ಟ್ ಕ್ಯಾಪ್ ನೀಡಲಾಯಿತು.
ಈ ವೇಳೆ ಅವರ ತಂದೆ ಸರ್ಫರಾಜ್‌ರನ್ನು ತಬ್ಬಿ, ಆನಂದಬಾಷ್ಪ ಸುರಿಸಿದರು. ಸರ್ಫರಾಜ್ ಪತ್ನಿ ಕೂಡಾ ಭಾವುಕರಾಗಿ ಕಣ್ಣೀರಿಟ್ಟರು. ಇದರ ಫೋಟೋ, ವಿಡಿಯೋ ವೈರಲ್ ಆಗಿದೆ.