ರಾಷ್ಟ್ರೀಯ ಗೇಮ್ಸ್‌ ಮೇಲೆ ಫಿಕ್ಸಿಂಗ್‌ ಕರಿನೆರಳು! ಟೆಕ್ವಾಂಡೋ ಸ್ಪರ್ಧೆಗಳಲ್ಲಿ ಪದಕಗಳು ಫಿಕ್ಸ್‌ ಆಗಿರುವ ಆರೋಪ

KannadaprabhaNewsNetwork |  
Published : Feb 04, 2025, 12:31 AM ISTUpdated : Feb 04, 2025, 03:28 AM IST
ಟೆಕ್ವಾಂಡೋ ಕ್ರೀಡೆಯಲ್ಲಿ 16 ವಿಭಾಗಗಳ ಪೈಕಿ 10 ವಿಭಾಗಗಳಲ್ಲಿ ಪದಕಗಳು ಪೂರ್ವನಿಗದಿಯಾಗಿವೆ ಎನ್ನುವ ಆರೋಪ ಕೇಳಿಬಂದಿದೆ.  | Kannada Prabha

ಸಾರಾಂಶ

ಟೆಕ್ವಾಂಡೋ ಸ್ಪರ್ಧೆಗಳಲ್ಲಿ ಪದಕಗಳು ಫಿಕ್ಸ್‌ ಆಗಿರುವ ಆರೋಪ. ಚಿನ್ನಕ್ಕೆ ₹3 ಲಕ್ಷ, ಬೆಳ್ಳಿಗೆ ₹2 ಲಕ್ಷ, ಕಂಚಿಗೆ ₹1 ಲಕ್ಷ ಲಂಚ ಪಡೆದಿರುವ ಬಗ್ಗೆ ಆಘಾತಕಾರಿ ವರದಿ.

ಡೆರ್ರಾಡೂನ್‌: ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಮೇಲೆ ಫಿಕ್ಸಿಂಗ್‌ ಕರಿನೆರಳು ಬಿದ್ದಿದೆ. ಟೆಕ್ವಾಂಡೋ ಸ್ಪರ್ಧೆಗಳು ಫಿಕ್ಸ್‌ ಆಗಿದ್ದು, 16 ವಿಭಾಗಗಳ ಪೈಕಿ 10ರಲ್ಲಿ ಸ್ಪರ್ಧೆ ನಡೆಯುವ ಮೊದಲೇ ಪದಕಗಳು ಯಾರಿಗೆ ಸಿಗಬೇಕು ಎನ್ನುವುದು ನಿರ್ಧಾರವಾಗಿದೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಟೆಕ್ವಾಂಡೋ ಸ್ಪರ್ಧೆಗಳ ನಿರ್ದೇಶಕರಾಗಿ ನೇಮಕಗೊಂಡಿದ್ದ ಟಿ. ಪ್ರವೀಣ್‌ ಕುಮಾರ್‌, ತಮಗೆ ಬೇಕಾದ ರೆಫ್ರಿ ಹಾಗೂ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಕ್ರೀಡೆಗೆ ಸಂಬಂಧಪಡದ ಕೆಲ ವ್ಯಕ್ತಿಗಳೂ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಚಿನ್ನದ ಪದಕಕ್ಕೆ ₹3 ಲಕ್ಷ , ಬೆಳ್ಳಿಗೆ ₹2 ಲಕ್ಷ, ಕಂಚಿಗೆ ₹1 ಲಕ್ಷ ಲಂಚ ಪಡೆಯಲಾಗಿದೆ ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ, ರಾಷ್ಟ್ರೀಯ ಗೇಮ್ಸ್‌ನ ತಾಂತ್ರಿಕ ಸಮಿತಿ ಟೆಕ್ವಾಂಡೋ ಸ್ಪರ್ಧೆಗಳಿಗೆ ಹೊಸ ನಿರ್ದೇಶಕರನ್ನು ನೇಮಿಸಿದ್ದು, ಕನಿಷ್ಠ ಅರ್ಧದಷ್ಟು ರೆಫ್ರಿ, ಅಧಿಕಾರಿಗಳನ್ನು ಬದಲಿಸುವಂತೆ ಹೊಸ ನಿರ್ದೇಶಕ ದಿನೇಶ್‌ ಕುಮಾರ್‌ಗೆ ಸೂಚಿಸಿದೆ. ಅಲ್ಲದೇ, ಎಲ್ಲಾ ಪಂದ್ಯಗಳನ್ನು ವಿಡಿಯೋ ರೆಕಾರ್ಡ್‌ ಮಾಡಲು ನಿರ್ಧರಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ತಾಂತ್ರಿಕ ಸಮಿತಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌
ಮಾ.5ರಂದು ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆ