ನವದೆಹಲಿ: ಇಲ್ಲಿ ನಡೆಯುತ್ತಿರುವ 28ನೇ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಪ್ರದೇಶದ ಸಿದ್ಧಾರ್ಥ್ ವಿಶ್ವಕರ್ಮ ಹಾಗೂ ತೆಲಂಗಾಣದ ರಶ್ಮಿಕಾ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 2018ರ ಚಾಂಪಿಯನ್ ಸಿದ್ಧಾರ್ಥ್, ಪಶ್ಚಿಮ ಬಂಗಾಳದ ಇಸಾಕ್ ಇಕ್ಬಾಲ್ ವಿರುದ್ಧ 6-4, 6-2ರಲ್ಲಿ ಗೆದ್ದರು. ಫೈನಲ್‌ನಲ್ಲಿ ಹರ್ಯಾಣದ ಕರಣ್ ಸಿಂಗ್ ವಿರುದ್ಧ ಆಡಲಿದ್ದಾರೆ. ಇದೇ ವೇಳೆ ಮಹಿಳಾ ಸಿಂಗಲ್ಸ್ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ರಶ್ಮಿಕಾ ಮಹಾರಾಷ್ಟ್ರದ ವೈಶ್ಣವಿ ವಿರುದ್ಧ 6-2, 6-0 ಅಂತರದಲ್ಲಿ ಗೆದ್ದರು. ಫೈನಲ್‌ನಲ್ಲಿ ಹಾಲಿ ಚಾಂಪಿಯನ್, ಗುಜರಾತ್‌ನ ವೈದೇಹಿ ಚೌಧರಿ ವಿರುದ್ಧ ಸೆಣಸಾಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಕರ್ನಾಟಕದ ಶರ್ಮದಾ ಬಾಲು-ವೈಶ್ಣವಿ ಜೋಡಿ ರನ್ನರ್-ಅಪ್ ಆಯಿತು.