ನವದೆಹಲಿ: ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಹಾಗೂ ಕುಟುಂಬಸ್ಥರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದು, ತಮ್ಮ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆಗೆ ಆಹ್ವಾನ ನೀಡಿದ್ದಾರೆ. 

ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಚಿನ್

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಚಿನ್, ‘ಅರ್ಜುನ್‌-ಸಾನಿಯಾ ಮದುವೆಗೆ ಆಗಮಿಸುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದೇವೆ. ಯುವ ಜೋಡಿಗೆ ನಿಮ್ಮ ಆಶೀರ್ವಾದ ಹಾಗೂ ಸಲಹೆಗಳಿಗೆ ಧನ್ಯವಾದಗಳು ಮೋದಿ ಜೀ’ ಎಂದಿದ್ದಾರೆ. 

ಅರ್ಜುನ್ ಮಾ.5ರಂದು ಸಾನಿಯಾ ಚಂಡೋಕ್‌ರನ್ನು ವರಿಸಲಿದ್ದಾರೆ

ಅರ್ಜುನ್ ಮಾ.5ರಂದು ಸಾನಿಯಾ ಚಂಡೋಕ್‌ರನ್ನು ವರಿಸಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಕಳೆದ ಆಗಸ್ಟ್‌ನಲ್ಲಿ ನೆರವೇರಿತ್ತು.