ಕಾಶ್ಮೀರದ ಉರಿಯ ಗಲ್ಲಿಯಲ್ಲಿ ಕ್ರಿಕೆಟ್‌ ಆಡಿದ ಸಚಿನ್‌ ತೆಂಡುಲ್ಕರ್‌

| Published : Feb 23 2024, 01:46 AM IST

ಕಾಶ್ಮೀರದ ಉರಿಯ ಗಲ್ಲಿಯಲ್ಲಿ ಕ್ರಿಕೆಟ್‌ ಆಡಿದ ಸಚಿನ್‌ ತೆಂಡುಲ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ ಕಾಶ್ಮೀರದ ಉರಿ ಪ್ರದೇಶದ ಬೀದಿಯಲ್ಲಿ ಅಲ್ಲಿನ ಸ್ಥಳೀಯರ ಜೊತೆ ಕ್ರಿಕೆಟ್‌ ಆಡಿದ್ದಾರೆ.

ಶ್ರೀನಗರ: ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ ಕಾಶ್ಮೀರದ ಉರಿ ಪ್ರದೇಶದ ಬೀದಿಯಲ್ಲಿ ಅಲ್ಲಿನ ಸ್ಥಳೀಯರ ಜೊತೆ ಕ್ರಿಕೆಟ್‌ ಆಡಿದ್ದಾರೆ. ಇದೇ ಮೊದಲ ಬಾರಿ ಕಾಶ್ಮೀರ ಪ್ರವಾಸ ಕೈಗೊಂಡಿರುವ ಸಚಿನ್ ದಾರಿ ಮದ್ಯೆ ಕ್ರಿಕೆಟ್‌ ಆಡುತ್ತಿದ್ದ ಸ್ಥಳೀಯರನ್ನು ಕಂಡು ಅವರ ಜೊತೆ ತಾವೂ ಕೆಲ ಕಾಲ ಆಡಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ಸಚಿನ್‌, ‘ಕ್ರಿಕೆಟ್‌ ಮತ್ತು ಕಾಶ್ಮೀರ: ಈ ಪಂದ್ಯ ನಡೆದಿದ್ದ ಸ್ವರ್ಗದಲ್ಲಿ’ ಎಂದು ಬರೆದುಕೊಂಡಿದ್ದಾರೆ. ಸಚಿನ್‌ರ ಆಟ ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಸ್ಥಳೀಯರು ಅವರೊಂದಿಗೆ ಫೋಟೋ ತೆಗೆಸಿ ಸಂತಸಪಟ್ಟರು.

ಟಿಟಿ: ಚೊಚ್ಚಲ ಬಾರಿ ಭಾರತ ಒಲಿಂಪಿಕ್ಸ್‌ಗೆ

ನವದೆಹಲಿ: ಭಾರತ ಪುರುಷ ಹಾಗೂ ಮಹಿಳಾ ಟೇಬಲ್‌ ಟೆನಿಸ್‌ ತಂಡಗಳು ಚೊಚ್ಚಲ ಬಾರಿ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿ ಇತಿಹಾಸ ಬರೆದಿವೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆಯುತ್ತಿರುವ ವಿಶ್ವ ಟಿಟಿ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಹೊರತಾಗಿಯೂ ಭಾರತದ ತಂಡಗಳಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಲಭಿಸಿತು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ರ್‍ಯಾಂಕಿಂಗ್‌ ಆಧಾರದಲ್ಲಿ ಭಾರತಕ್ಕೆ ಪ್ರವೇಶ ಲಭಿಸಿದವು. ಮಾ.5ರಂದು ಒಲಿಂಪಿಕ್ಸ್‌ ಪ್ರವೇಶಿಸಿದ ತಂಡಗಳ ಅಧಿಕೃತ ಪಟ್ಟಿ ಪ್ರಕಟಗೊಳ್ಳಲಿದೆ. ಒಲಿಂಪಿಕ್ಸ್‌ನಲ್ಲಿ 2008ರಿಂದ ಟಿಟಿ ಆಡಿಸಲಾಗುತ್ತಿದ್ದು, 2 ವಿಭಾಗಗಳಲ್ಲೂ 16 ತಂಡಗಳು ಪಾಲ್ಗೊಳ್ಳಲಿವೆ.