ವಿರಾಟ್‌ ದಾಖಲೆಗಳ ಸುರಿಮಳೆ: ಕ್ಯಾಚ್‌, ರನ್‌ ಚೇಸಿಂಗ್‌ನಲ್ಲೂ ಕಿಂಗ್ ಕೊಹ್ಲಿ ದರ್ಬಾರ್‌!

KannadaprabhaNewsNetwork |  
Published : Mar 05, 2025, 12:31 AM IST
ಕೊಹ್ಲಿ ವಿರಾಟ್‌ | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್‌. ಕೊಹ್ಲಿ ಭಾರತದ ನಂ.1. ರನ್‌ ಗಳಿಕೆಯಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದ ರನ್‌ ಮೆಷಿನ್‌.

ದುಬೈ: ರನ್‌ ಮೆಷಿನ್‌ ಮಾತ್ರವಲ್ಲದೇ ಚುರುಕಿನ ಫೀಲ್ಡರ್‌ ಕೂಡಾ ಆಗಿರುವ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್‌ ಪಡೆದ ಭಾರತೀಯ ಫೀಲ್ಡರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಜೋಶ್‌ ಇಂಗ್ಲಿಸ್‌ ಹಾಗೂ ನೇಥನ್‌ ಎಲ್ಲಿಸ್‌ ಕ್ಯಾಚ್‌ ಪಡೆದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಚ್‌ ಸಂಖ್ಯೆಯನ್ನು 336ಕ್ಕೆ ಹೆಚ್ಚಿಸಿದರು. ಅವರು 549 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ 509 ಪಂದ್ಯಗಳಲ್ಲಿ 334 ಕ್ಯಾಚ್‌ ಪಡೆದಿದ್ದ ರಾಹುಲ್‌ ದ್ರಾವಿಡ್‌ ದಾಖಲೆ ಮುರಿದರು. ಅಂ.ರಾ. ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್‌ ಪಡೆದ ಫೀಲ್ಡರ್‌ ಎಂಬ ದಾಖಲೆ ಶ್ರೀಲಂಕಾದ ಮಹೇಲ ಜಯವರ್ಧನೆ ಹೆಸರಲ್ಲಿದೆ. ಅವರು 652 ಪಂದ್ಯಗಳಲ್ಲಿ 440 ಕ್ಯಾಚ್‌ ಪಡೆದಿದ್ದಾರೆ.

01 ಆಟಗಾರ: ಐಸಿಸಿ ಟೂರ್ನಿಗಳ ನಾಕೌಟ್‌ನಲ್ಲಿ 1000 ರನ್‌ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್‌ ಕೊಹ್ಲಿ.

ಚಾಂಪಿಯನ್ಸ್‌ ಟ್ರೋಫಿ, ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ಫಿಫ್ಟಿ ದಾಖಲೆ

ಕೊಹ್ಲಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅತಿ ಹೆಚ್ಚು(7) ಬಾರಿ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಶಿಖರ್‌ ಧವನ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ ತಲಾ 6 ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು, ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ 50+ ಸ್ಕೋರ್‌ ದಾಖಲೆಯನ್ನೂ ಕೊಹ್ಲಿ ನಿರ್ಮಿಸಿದ್ದಾರೆ. ಅವರು ಒಟ್ಟು 24 ಬಾರಿ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್‌ 23 ಬಾರಿ 50+ ರನ್‌ ಗಳಿಸಿದ್ದರು.ಏಕದಿನ: ಕೊಹ್ಲಿ ವಿಶ್ವದಲ್ಲೇ ನಂ.1

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್‌ ಪಡೆದ ಫಿಲ್ಡರ್‌ಗಳ ಪೈಕಿ ಕೊಹ್ಲಿ ವಿಶ್ವ 2ನೇ ಸ್ಥಾನಕ್ಕೇರಿದ್ದಾರೆ. ಅವರು ಏಕದಿನದಲ್ಲಿ ಒಟ್ಟು 161 ಕ್ಯಾಚ್‌ ಪಡೆದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌(160) ರನ್ನು ಹಿಂದಿಕ್ಕಿದರು. ಜಯವರ್ಧನೆ 218 ಕ್ಯಾಚ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.ಚೇಸಿಂಗ್‌ನಲ್ಲಿ ವಿರಾಟ್‌ ಕೊಹ್ಲಿ 8000 ರನ್‌

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಎದುರಾಳಿ ತಂಡದ ವಿರುದ್ಧ ಗುರಿ ಬೆನ್ನತ್ತುವ ವೇಳೆ 8000 ರನ್‌ ಪೂರ್ಣಗೊಳಿಸಿದ ವಿಶ್ವದ ಕೇವಲ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರು 166 ಪಂದ್ಯಗಳ 159 ಇನ್ನಿಂಗ್ಸ್‌ಗಳಲ್ಲಿ 00000 ರನ್‌ ಕಲೆಹಾಕಿದ್ದಾರೆ. ಸಚಿನ್‌ ತೆಂಡುಲ್ಕರ್‌ 232 ಇನ್ನಿಂಗ್ಸ್‌ಗಳಲ್ಲಿ 8720 ರನ್‌ ಗಳಿಸಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 6115, ಶ್ರೀಲಂಕಾದ ಜಯಸೂರ್ಯ 5742 ರನ್‌ ಬಾರಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!