ಆಸೀಸ್‌ ಟೆಸ್ಟ್‌ ತಂಡಕ್ಕಿನ್ನು ಸ್ಟೀವ್‌ ಸ್ಮಿತ್‌ ಆರಂಭಿಕ ?

KannadaprabhaNewsNetwork |  
Published : Jan 11, 2024, 01:31 AM ISTUpdated : Jan 11, 2024, 11:50 AM IST
ಸ್ಟೀವ್‌ ಸ್ಮಿತ್‌ | Kannada Prabha

ಸಾರಾಂಶ

ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆಸ್ಟ್ರೇಲಿಯಾದ ತಾರಾ ಬ್ಯಾಟರ್‌ ಡೇವಿಡ್‌ ವಾರ್ನರ್ ಸ್ಥಾನದಲ್ಲಿ ಆರಂಭಿಕನಾಗಿ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಆಡಲಿರುವ ಸುಳಿವು ಸಿಕ್ಕಿದೆ. 

ಮೆಲ್ಬರ್ನ್‌: ಜ.17ರಿಂದ ತವರಿನಲ್ಲಿ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕನಾಗಿ ಸ್ಟೀವ್‌ ಸ್ಮಿತ್‌ ಆಡುವ ಸಾಧ್ಯತೆ ಇದೆ. 

ಇತ್ತೀಚೆಗೆ ಡೇವಿಡ್‌ ವಾರ್ನರ್‌ರ ನಿವೃತ್ತಿಯಿಂದಾಗಿ ತೆರವುಗೊಂಡಿರುವ ಸ್ಥಾನವನ್ನು ತನ್ನ ಹಿರಿಯ ಆಟಗಾರನಿಗೆ ನೀಡಲು ತಂಡದ ಆಡಳಿತ ನಿರ್ಧರಿಸಿದೆ ಎನ್ನಲಾಗಿದೆ.

ಟೆಸ್ಟ್‌ ರ್‍ಯಾಂಕಿಂಗ್‌: 6ನೇ ಸ್ಥಾನಕ್ಕೇರಿದ ವಿರಾಟ್‌!
ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಏರಿಕೆ ಕಂಡು 6ನೇ ಸ್ಥಾನ ತಲುಪಿದ್ದಾರೆ. 

ಇನ್ನು ನಾಯಕ ರೋಹಿತ್‌ ಶರ್ಮಾ ಅಗ್ರ-10ರ ಪಟ್ಟಿಗೆ ಪ್ರವೇಶಿಸಿದ್ದು, 4 ಸ್ಥಾನಗಳ ಏರಿಕೆಯೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಅಗ್ರಸ್ಥಾನ ಕಾಯ್ದುಕೊಂಡರೆ, ಜಸ್‌ಪ್ರೀತ್‌ ಬೂಮ್ರಾ ಒಂದು ಸ್ಥಾನ ಏರಿಕೆ ಕಂಡು 5ನೇ ಸ್ಥಾನ ಪಡೆದಿದ್ದಾರೆ. 13 ಸ್ಥಾನ ಜಿಗಿದಿರುವ ಮೊಹಮದ್‌ ಸಿರಾಜ್‌, 17ನೇ ಸ್ಥಾನದಲ್ಲಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!
ಭಾರತ 6ನೇ ಬಾರಿಗೆ ಅಂಡರ್‌-19 ವಿಶ್ವ ಚಾಂಪಿಯನ್‌