ಅಶಿಸ್ತು ತೋರಿದ್ದಕ್ಕೆ ಕಿಶನ್‌, ಶ್ರೇಯಸ್‌ ತಂಡದಿಂದ ಔಟ್‌?

KannadaprabhaNewsNetwork |  
Published : Jan 11, 2024, 01:31 AM ISTUpdated : Jan 11, 2024, 11:53 AM IST
ಶ್ರೇಯಸ್  | Kannada Prabha

ಸಾರಾಂಶ

ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ಶ್ರೇಯಸ್ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಆಯ್ಕೆಯಾಗದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಶಿಸ್ತಿನ ಕಾರಣಕ್ಕಾಗಿ ಇವರಿಬ್ಬರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ಶ್ರೇಯಸ್ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಆಯ್ಕೆಯಾಗದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಶಿಸ್ತಿನ ಕಾರಣಕ್ಕಾಗಿ ಇವರಿಬ್ಬರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಮಾನಸಿಕ ಒತ್ತಡದಿಂದ ಹೊರಬರಲು ವಿಶ್ರಾಂತಿ ಬೇಕೆಂದು ಕಾರಣ ಹೇಳಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ದೂರ ಉಳಿದಿದ್ದ ಇಶಾನ್‌ ಕಿಶನ್‌, ಬಳಿಕ ದುಬೈನಲ್ಲಿ ಎಂ.ಎಸ್‌.ಧೋನಿ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. 

ಅಷ್ಟೇ ಅಲ್ಲ, ಟಿವಿ ಶೋಗಳಲ್ಲೂ ಕೂಡಾ ಭಾಗಿಯಾಗಿದ್ದರು. ಅವರ ಈ ನಡೆ ಬಿಸಿಸಿಐಗೆ ಸರಿ ಕಾಣಲಿಲ್ಲ. ‘ಕಿಶನ್‌ ನಂಬಿಕೆಗೆ ಅರ್ಹರಲ್ಲ. ಕ್ರಿಕೆಟ್‌ನಿಂದ ದೂರ ಉಳಿಯಲು ಕೊಟ್ಟ ಕಾರಣವೇ ಬೇರೆ, ಮಾಡಿದ್ದೇ ಬೇರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ. 

ಅವರ ಈ ನಡೆ, ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲೂ ಅವರಿಗೆ ಜಾಗ ಸಿಗದಂತೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇನ್ನು, ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ತಂಡದ ಅವಶ್ಯಕತೆಗೆ ತಕ್ಕಂತೆ ಆಡಲು ವಿಫಲರಾಗಿದ್ದ ಶ್ರೇಯಸ್‌ಗೆ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ರಣಜಿ ಟ್ರೋಫಿಯಲ್ಲಿ ಆಡಲು ಸೂಚಿಸಿದ್ದರಂತೆ. 

ಶ್ರೇಯಸ್‌ ಆ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೆ ಇದ್ದಾಗ ಸಿಟ್ಟಾದ ಅಗರ್ಕರ್‌, ಆಫ್ಘನ್‌ ಸರಣಿಗೆ ಶ್ರೇಯಸ್‌ರನ್ನು ಆಯ್ಕೆ ಮಾಡಲಿಲ್ಲ. ಆ ಬಳಿಕವಷ್ಟೇ ರಣಜಿ ಪಂದ್ಯವಾಡಲು ಶ್ರೇಯಸ್‌ ಒಪ್ಪಿದರು ಎನ್ನಲಾಗಿದೆ.

ವರದಿ ಸುಳ್ಳು: ದ್ರಾವಿಡ್‌ಇಶಾನ್‌ ಕಿಶನ್‌ ಮತ್ತು ಶ್ರೇಯಸ್ ಅಯ್ಯರ್‌ ವಿರುದ್ಧದ ಅಶಿಸ್ತಿನ ಕ್ರಮವನ್ನು ಕೋಚ್‌ ರಾಹುಲ್ ದ್ರಾವಿಡ್‌ ಅಲ್ಲಗಳೆದಿದ್ದು, ಅವರ ಬೇಡಿಕೆಗೆ ನಾವು ಸ್ಪಂದಿಸಿದ್ದೇವೆ. ಸ್ವಂತ ನಿರ್ಧಾರದಂತೆ ಅವರು ಹೊರಗುಳಿದಿದ್ದಾರೆ. ಯಾವುದೇ ಶಿಸ್ತಿನ ಕ್ರಮವಲ್ಲ ಎಂದಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ