38ನೇ ರಾಷ್ಟ್ರೀಯ ಕ್ರೀಡಾಕೂಟ : ಕರ್ನಾಟಕಕ್ಕೆ ಒಟ್ಟಾರೆ 9 ಚಿನ್ನ ಸೇರಿ 17 ಪದಕ, ಪಟ್ಟಿಯಲ್ಲಿ 3ನೇ ಸ್ಥಾನ

KannadaprabhaNewsNetwork |  
Published : Feb 01, 2025, 12:47 AM ISTUpdated : Feb 01, 2025, 04:15 AM IST
50 ಮೀ. ಫ್ರೀ ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕರ್ನಾಟಕದ ಧಿನಿಧಿ ದೇಸಿಂಘು, ಕಂಚಿನ ಪದಕ ಪಡೆದ ನೀನಾ ವೆಂಕಟೇಶ್‌.  | Kannada Prabha

ಸಾರಾಂಶ

38ನೇ ರಾಷ್ಟ್ರೀಯ ಕ್ರೀಡಾಕೂಟ. 14 ವರ್ಷದ ಧಿನಿಧಿ ದೇಸಿಂಘುಗೆ 4ನೇ ಚಿನ್ನ. ಕರ್ನಾಟಕಕ್ಕೆ ಒಟ್ಟಾರೆ 9 ಚಿನ್ನ ಸೇರಿ 17 ಪದಕ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ.

ಡೆಹ್ರಾಡೂನ್‌: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳು ಪದಕ ಬೇಟೆ ಮುಂದುವರಿದಿದೆ. ಕೂಟದ 3ನೇ ದಿನವಾದ ಶುಕ್ರವಾರ, ಈಜಿನಲ್ಲಿ ರಾಜ್ಯಕ್ಕೆ ಮತ್ತೆ 5 ಪದಕಗಳು ಸಿಕ್ಕವು. ಕರ್ನಾಟಕ ಒಟ್ಟಾರೆ 9 ಚಿನ್ನ ಸೇರಿ 17 ಪದಕ ಗೆದ್ದಿದ್ದು, ಈ ಪೈಕಿ 15 ಪದಕಗಳು ಈಜಿನಲ್ಲೇ ಸಿಕ್ಕಿವೆ.

ಮಹಿಳೆಯರ 50 ಮೀ. ಫ್ರೀ ಸ್ಟೈಲ್‌ ವಿಭಾಗದಲ್ಲಿ ಧಿನಿಧಿ ದೇಸಿಂಘು 26.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಕೂಟದಲ್ಲಿ ಇದು ಅವರ 4ನೇ ಚಿನ್ನ. 1 ಕಂಚಿನ ಪದಕವನ್ನೂ ಧಿನಿಧಿ ಜಯಿಸಿದ್ದಾರೆ. ಇದೇ ವಿಭಾಗದಲ್ಲಿ ನೀನಾ ವೆಂಕಟೇಶ್‌ಗೆ ಕಂಚಿನ ಪದಕ ದೊರೆಯಿತು.

ಪುರುಷರ 400 ಮೀ. ಮೆಡ್ಲೆ ವಿಭಾಗದಲ್ಲಿ ರಾಜ್ಯದ ಶೋನ್‌ ಗಂಗೂಲಿ ಚಿನ್ನ ಜಯಿಸಿದರು. ಪುರುಷರ 50 ಮೀ. ಫ್ರೀ ಸ್ಟೈಲ್‌ ವಿಭಾಗದಲ್ಲಿ ಶ್ರೀಹರಿ ನಟರಾಜ್‌ ಬೆಳ್ಳಿ ಜಯಿಸಿದರೆ, ಮಹಿಳೆಯರ 800 ಮೀ. ಫ್ರೀ ಸ್ಟೈಲ್‌ ವಿಭಾಗದಲ್ಲಿ ಶ್ರೀಚರಣಿ ಕಂಚಿನ ಪದಕ ಪಡೆದರು.

ಕರ್ನಾಟಕ ಈ ವರೆಗೂ 9 ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 17 ಪದಕ ಪಡೆದು ಪದಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 9 ಚಿನ್ನ ಸೇರಿ 19 ಪದಕ ಗೆದ್ದಿರುವ ಮಣಿಪುರ, 9 ಚಿನ್ನ ಸೇರಿ 18 ಪದಕ ಗೆದ್ದಿರುವ ಸರ್ವಿಸಸ್‌ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

2036ರ ಒಲಿಂಪಿಕ್ಸ್‌ ಆಯೋಜನೆಗೆ ಸಕಲ ಪ್ರಯತ್ನ: ಮೋದಿ ಪುನರುಚ್ಚಾರ
ವಿಶ್ವಕಪ್‌ ಆಡಲು ಭಾರತಕ್ಕೆ ಹೋಗಲ್ಲ : ಬಾಂಗ್ಲಾ ಕಿರಿಕ್‌