ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಸಿಸಿ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನೂತನ ಪಟ್ಟಿಯಲ್ಲಿ 22ರ ಜೈಸ್ವಾಲ್ 7 ಸ್ಥಾನ ಪ್ರಗತಿ ಸಾಧಿಸಿದರು.
ದುಬೈ: ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಸಿಸಿ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 22ರ ಜೈಸ್ವಾಲ್ 7 ಸ್ಥಾನ ಪ್ರಗತಿ ಸಾಧಿಸಿದರು. ಶಿವಂ ದುಬೆ 265ನೇ ಸ್ಥಾನದಿಂದ 58ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 12 ಸ್ಥಾನ ಪ್ರಗತಿ ಸಾಧಿಸಿ 5ನೇ ಸ್ಥಾನಕ್ಕೇರಿದ್ದು, ರವಿ ಬಿಷ್ಣೋಯ್ 6ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಆಲ್ರೌಂಡರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದ್ದು, ಹಾರ್ದಿಕ್ ಪಾಂಡ್ಯ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.ಆ್ಯಲೆನ್ ಸ್ಫೋಟಕ ಆಟ:
ಪಾಕ್‌ಗೆ ಸರಣಿ ಸೋಲುಡ್ಯುನೆಡಿನ್(ನ್ಯೂಜಿಲೆಂಡ್): ಫಿನ್ ಆ್ಯಲೆನ್ ಸ್ಫೋಟಕ ಆಟದ ನೆರವಿನಿಂದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ 46 ರನ್ ಜಯಗಳಿಸಿದ್ದು, 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 223 ರನ್ ಕಲೆ ಹಾಕಿತು. ಪಾಕ್ ಬೌಲರ್‌ಗಳ ಬೆವರಿಳಿಸಿದ ಆ್ಯಲೆನ್ 62 ಎಸೆತಗಳಲ್ಲಿ ಬರೊಬ್ಬರಿ 137 ಚಚ್ಚಿದರು. ಬೃಹತ್ ಗುರಿ ಬೆನ್ನತ್ತಿದ ಪಾಕ್ 20 ಓವರಲ್ಲಿ 7 ವಿಕೆಟ್‌ಗೆ 179ರನ್ ಗಳಿಸಲಷ್ಟೆ ಶಕ್ತವಾಯಿತು. ಬಾಬರ್ ಅಜಮ್(58) ಹೊರತಾಗಿ ಬೇರಾರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆ್ಯಲೆನ್ 16 ಸಿಕ್ಸರ್ ಸಿಡಿಸಿದ್ದು, ಅಂ.ರಾ. ಟಿ20 ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ಅಫ್ಘಾನಿಸ್ತಾನದ ಹಜ್ರತುಲ್ಲಾ ಜಜಾಯ್ ದಾಖಲೆ ಸರಿಗಟ್ಟಿದರು.