ದುಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ನ ವೇಳಾಪಟ್ಟಿ ಶುಕ್ರವಾರ ಪ್ರಕಟಗೊಂಡಿದ್ದು, ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜೂ.9ರಂದು ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಜೂ.1ರಂದು ಟೂರ್ನಿ ಆರಂಭಗೊಳ್ಳಲಿದ್ದು, ವೆಸ್ಟ್‌ಇಂಡೀಸ್, ಅಮೆರಿಕ ಟೂರ್ನಿಗೆ ಆತಿಥ್ಯ ವಹಿಸಲಿದೆ.
9ನೇ ಆವೃತ್ತಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಜೂ.1ರಂದು ಆತಿಥೇಯ ಅಮೆರಿಕ ಹಾಗೂ ಕೆನಡಾ ಮುಖಾಮುಖಿಯಾಗಲಿವೆ. ಬಹುತೇಕ ಎಲ್ಲಾ ದಿನ 2 ಪಂದ್ಯಗಳು ನಡೆಯಲಿವೆ. ಜೂ.26, 27ಕ್ಕೆ ಸೆಮಿಫೈನಲ್, ಜೂ.29ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ವೆಸ್ಟ್‌ಇಂಡೀಸ್‌ನ 6, ಅಮೆರಿಕದ 3 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.
20 ತಂಡ: ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 5 ತಂಡಗಳು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೂಪರ್-8 ಹಂತ ಪ್ರವೇಶಿಸಲಿವೆ. ಸೂಪರ್-8ನಲ್ಲಿ ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ಅಗ್ರ-2 ತಂಡಗಳು ಸೆಮೀಸ್‌ಗೇರಲಿವೆ.
ಟಿ20 ವಿಶ್ವಕಪ್ ಗುಂಪುಗಳು
ಎ ಗುಂಪು: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ
ಬಿ ಗುಂಪು: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್
ಸಿ ಗುಂಪು: ನ್ಯೂಜಿಲೆಂಡ್, ವಿಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂಗಿನಿ
ಡಿ ಗುಂಪು: ದ.ಆಫ್ರಿಕಾ, ಶ್ರೀಲಂಕಾ, ನೆದರ್‌ಲೆಂಡ್ಸ್, ಬಾಂಗ್ಲಾದೇಶ, ನೇಪಾಳ
ಭಾರತದ ವೇಳಾಪಟ್ಟಿ: ಎದುರಾಳಿ ದಿನಾಂಕ ಐರ್ಲೆಂಡ್ ಜೂ.5, ಪಾಕಿಸ್ತಾನ ಜೂ.9, ಅಮೆರಿಕ್ ಜೂ.12, ಕೆನಡಾ ಜೂ.15
20 ತಂಡಗಳು: ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಒಟ್ಟು ತಂಡಗಳ ಸಂಖ್ಯೆ 20
09 ಕ್ರೀಡಾಂಗಣ: ವೆಸ್ಟ್‌ಇಂಡೀಸ್‌ನ 6, ಅಮೆರಿಕದ 3 ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
55 ಪಂದ್ಯಗಳು: ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 55 ಪಂದ್ಯಗಳು ನಡೆಯಲಿವೆ.