11ನೇ ಆವೃತ್ತಿ ಪ್ರೊ ಕಬಡ್ಡಿ : ತಮಿಳ್‌ ತಲೈವಾಸ್‌, ಯು ಮುಂಬಾಗೆ ಗೆಲುವು - ಪುಣೇರಿಗೆ ಟೂರ್ನಿಯಲ್ಲಿ ಮೊದಲು ಸೋಲು

KannadaprabhaNewsNetwork |  
Published : Oct 24, 2024, 12:30 AM ISTUpdated : Oct 24, 2024, 04:13 AM IST
ತಲೈವಾಸ್‌ನ ಸಚಿನ್‌ | Kannada Prabha

ಸಾರಾಂಶ

ಹಾಲಿ ಚಾಂಪಿಯನ್‌ ಪುಣೇರಿ ಪಲ್ಟನ್‌ ಹಾಗೂ ಗುಜರಾತ್‌ ಜೈಂಟ್ಸ್‌ ಸೋಲನುಭವಿಸಿದವು. ಪುಣೇರಿಗೆ ಇದು ಟೂರ್ನಿಯಲ್ಲಿ ಮೊದಲು ಸೋಲು.

ಹೈದರಾಬಾದ್‌: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ತಮಿಳ್‌ ತಲೈವಾಸ್‌ ಹಾಗೂ ಯು ಮುಂಬಾ ತಂಡಗಳು ಗೆಲುವು ಸಾಧಿಸಿವೆ. ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪುಣೇರಿ ಪಲ್ಟನ್‌ ವಿರುದ್ಧ ತಮಿಳ್‌ ತಲೈವಾಸ್‌ ವಿರುದ್ಧ 35-30 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. 

ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಪುಣೇರಿಗೆ ಇದು ಮೊದಲ ಸೋಲು. ತಲೈವಾಸ್‌ನ ನರೇಂದರ್‌ ಖಂಡೋಲಾ 9, ಸಚಿನ್‌ 8 ಅಂಕ ಗಳಿಸಿದರು. ಪುಣೇರಿಯ ಮೋಹಿತ್‌ ಗೋಯತ್‌(13 ಅಂಕ) ಹೋರಾಟ ವ್ಯರ್ಥವಾಯಿತು.ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬಾ 33-27 ಅಂಕಗಳಿಂದ ಜಯಗಳಿಸಿತು. ಅಮೀರ್‌ ಮೊಹಮದ್‌ ಜಫರ್‌ದಾನೆಶ್‌ 10 ಅಂಕ ಗಳಿಸಿ ಮುಂಬಾ ಗೆಲುವಿನ ರೂವಾರಿಯಾದರು. ಮುಂಬಾಗೆ ಇದು ಮೊದಲ ಜಯ.

ಇಂದಿನ ಪಂದ್ಯಗಳುಬೆಂಗಾಲ್‌-ಯುಪಿ ಯೋಧಾಸ್‌, ರಾತ್ರಿ 8ಕ್ಕೆಹರ್ಯಾಣ-ಜೈಪುರ ಪ್ಯಾಂಥರ್ಸ್‌, ರಾತ್ರಿ 9ಕ್ಕೆ

ಭಾರತ vs ಕಿವೀಸ್‌ ಮಹಿಳಾ ಏಕದಿನ ಸರಣಿ ಇಂದು ಶುರು

ಅಹಮದಾಬಾದ್‌: ಭಾರತ ಹಾಗೂ ನ್ಯೂಜಿಲೆಂಡ್‌ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭಗೊಳ್ಳಲಿದೆ. ಎಲ್ಲಾ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ ಭಾರತ ತಂಡ, ತವರಿನ ಏಕದಿನ ಸರಣಿಯಲ್ಲಿ ಸುಧಾರಿತ ಆಟವಾಡುವ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿ ಹರ್ಮನ್‌ಪ್ರೀತ್‌ ಕೌರ್‌ರ ನಾಯಕತ್ವದ ವಿಚಾರದಲ್ಲಿ ಈ ಸರಣಿ ಮಹತ್ವದ್ದು ಎನಿಸಿಕೊಂಡಿದೆ. 35 ವರ್ಷದ ಕೌರ್‌ ತಮ್ಮ ನಾಯಕತ್ವ ಉಳಿಸಿಕೊಳ್ಳಬೇಕಿದ್ದರೆ ಈ ಸರಣಿಯಲ್ಲಿ ಭಾರತ ಅಭೂತಪೂರ್ವ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಭಾರತ ತಂಡದಲ್ಲಿ ಹಿರಿಯರ ಜೊತೆ ಕೆಲ ಹೊಸ ಆಟಗಾರ್ತಿಯರೂ ಇದ್ದು, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಕಾತರದಲ್ಲಿದ್ದಾರೆ. ಕರ್ನಾಟಕದ ಶ್ರೇಯಾಂಕ ಪಾಟೀಲ್‌ ಕೂಡಾ ತಂಡದಲ್ಲಿದ್ದಾರೆ.

ಅತ್ತ, ಟಿ20 ವಿಶ್ವಕಪ್‌ನ ಚಾಂಪಿಯನ್‌ ನ್ಯೂಜಿಲೆಂಡ್‌ ತಂಡ ತನ್ನ ಗೆಲುವಿನ ಓಟವನ್ನು ಭಾರತದ ಏಕದಿನ ಸರಣಿಯಲ್ಲೂ ಮುಂದುವರಿಯುವ ನಿರೀಕ್ಷೆಯಲ್ಲಿದೆ.

ಪಂದ್ಯ: ಮಧ್ಯಾಹ್ನ 1.30ಕ್ಕೆ, ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ