ಇಂದಿನಿಂದ ಟೀಂ ಇಂಡಿಯಾ ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯ ಪ್ರೈಮ್‌ ಮಿನಿಸ್ಟರ್‌ ಇಲೆವೆನ್‌ ತಂಡ ಎದುರಾಳಿ

ಸಾರಾಂಶ

ಡಿ.6ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಹಗಲು-ರಾತ್ರಿ ಟೆಸ್ಟ್‌ ಪಂದ್ಯದ ಪೂರ್ವಭಾವಿ ಸಿದ್ಧತೆಗಾಗಿ ಭಾರತ ತಂಡ ಶನಿವಾರದಿಂದ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ.

ಕ್ಯಾನ್‌ಬೆರ್ರಾ: ಡಿ.6ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಹಗಲು-ರಾತ್ರಿ ಟೆಸ್ಟ್‌ ಪಂದ್ಯದ ಪೂರ್ವಭಾವಿ ಸಿದ್ಧತೆಗಾಗಿ ಭಾರತ ತಂಡ ಶನಿವಾರದಿಂದ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಹಗಲು-ರಾತ್ರಿ ಪಂದ್ಯಕ್ಕೆ ಕ್ಯಾನ್‌ಬೆರ್ರಾದ ಮಾನುಕಾ ಓವಲ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯಾದ ಪ್ರೈಮ್‌ ಮಿನಿಸ್ಟರ್‌ ಇಲೆವೆನ್‌ ತಂಡದ ವಿರುದ್ಧ ಈ ಪಂದ್ಯ ನಡೆಯಲಿದ್ದು, ಪಿಂಕ್‌ ಬಾಲ್‌ ಬಳಲಾಗುತ್ತದೆ.

ಭಾರತ ಈ ವರೆಗೂ 4 ಬಾರಿ ಹಗಲು-ರಾತ್ರಿ ಟೆಸ್ಟ್‌ ಆಡಿದೆ. ಈ ಪೈಕಿ 4 ವರ್ಷಗಳ ಹಿಂದೆ ಅಡಿಲೇಡ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್‌ಗೆ ಆಲೌಟಾಗಿತ್ತು. ಹೀಗಾಗಿ ಈ ಬಾರಿ ಅಭ್ಯಾಸ ಪಂದ್ಯದ ಮೂಲಕ ಮಹತ್ವದ ಟೆಸ್ಟ್‌ಗೆ ಸಿದ್ಧತೆ ನಡೆಸಲಿದೆ.

ಅಭ್ಯಾಸ ಪಂದ್ಯದಲ್ಲಿ ಭಾರತ ಬೌಲಿಂಗ್‌ಗಿಂತ ಹೆಚ್ಚಿನ ಸಮಯ ಬ್ಯಾಟಿಂಗ್‌ಗೆ ಒತ್ತು ಕೊಡುವ ಸಾಧ್ಯತೆಯಿದೆ. ಪ್ರಮುಖವಾಗಿ ರೋಹಿತ್‌ ಶರ್ಮಾ, ಶುಭ್‌ಮನ್ ಗಿಲ್‌ ಈ ಪಂದ್ಯದ ಮೂಲಕ ಆಸೀಸ್‌ ದಾಳಿಯನ್ನು ಎದುರಿಸಲು ತಯಾರಿ ನಡೆಸಲಿದ್ದಾರೆ. ಅಲ್ಲದೆ, 2ನೇ ಟೆಸ್ಟ್‌ನಲ್ಲಿ ತನ್ನ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಗೊಂದಲ ಉಂಟಾಗಿರುವ ಕಾರಣ ಅದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತ ಕಾತರಿಸುತ್ತಿದೆ.

ಪ್ರೈಮ್‌ ಮಿನಿಸ್ಟರ್‌ ತಂಡದಲ್ಲಿ ಸ್ಕಾಟ್‌ ಬೊಲಾಂಡ್‌, ಮ್ಯಾಥ್ಯೂ ರೆನ್‌ಶಾ ಸೇರಿ ಜೊತೆಗೆ ಹಲವು ಯುವ ಆಟಗಾರರಿದ್ದಾರೆ.

ಪಂದ್ಯ: ಬೆಳಗ್ಗೆ 9.10ಕ್ಕೆ(ಭಾರತೀಯ ಕಾಲಮಾನ)

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

Share this article