ಇಂದು ವಿನೇಶ್‌ ಅನರ್ಹತೆ ಪ್ರಕರಣದ ತೀರ್ಪು ಪ್ರಕಟ: ಸ್ಟಾರ್‌ ರೆಸ್ಲರ್‌ಗೆ ಸಿಗುತ್ತಾ ಬೆಳ್ಳಿ ಪದಕ?

KannadaprabhaNewsNetwork |  
Published : Aug 13, 2024, 12:48 AM ISTUpdated : Aug 13, 2024, 04:16 AM IST
ವಿನೇಶ್‌ ಫೋಗಟ್‌ | Kannada Prabha

ಸಾರಾಂಶ

ಬೆಳ್ಳಿ ಪದಕ ನಿರೀಕ್ಷೆಯಲ್ಲಿರುವ ಭಾರತದ ಕುಸ್ತಿಪಟು. ಈಗಾಗಲೇ ಕುಸ್ತಿಗೆ ನಿವೃತ್ತಿ ಘೋಷಿಸಿರುವ 29ರ ವಿನೇಶ್‌, ಸದ್ಯ ತೀರ್ಪು ತಮ್ಮ ಪರವಾಗಿ ಬರುವ ನಿರೀಕ್ಷೆಯಲ್ಲಿದ್ದಾರೆ.

ಪ್ಯಾರಿಸ್‌: ಒಲಿಂಪಿಕ್ಸ್‌ ಕುಸ್ತಿ ಸ್ಪರ್ಧೆಯ ಫೈನಲ್‌ನಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತದ ಕುಸ್ತಿಪಟು ವಿನೇಶ್‌ ಪೋಗಟ್‌ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಮಂಗಳವಾರ ಪ್ರಕಟಿಸಲಿದೆ. 

ಈಗಾಗಲೇ ಕುಸ್ತಿಗೆ ನಿವೃತ್ತಿ ಘೋಷಿಸಿರುವ 29ರ ವಿನೇಶ್‌, ಸದ್ಯ ತೀರ್ಪು ತಮ್ಮ ಪರವಾಗಿ ಬರುವ ಹಾಗೂ ಬೆಳ್ಳಿ ಪದಕ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.ಬುಧವಾರ ವಿನೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರವೇ ಕೊನೆಗೊಳಿಸಿತ್ತು. ಶನಿವಾರ ಇದರ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿತ್ತು. 

ಆದರೆ ತೀರ್ಪನ್ನು ನ್ಯಾಯಾಲಯ ಮುಂದೂಡಿತ್ತು.50 ಕೆಜಿ ವಿಭಾಗದ ಫೈನಲ್‌ ಪಂದ್ಯಕ್ಕೂ ಮುನ್ನ ದೇಹದ ತೂಕ 100 ಗ್ರಾಂನಷ್ಟು ಹೆಚ್ಚಿತ್ತು ಎನ್ನುವ ಕಾರಣಕ್ಕಾಗಿ ವಿನೇಶ್‌ ಪೋಗಟ್‌ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಮೂಲಕ ಫೈನಲ್‌ನಲ್ಲಿ ಆಡುವ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ವಿನೇಶ್‌, ತಮಗೆ ಬೆಳ್ಳಿ ಪದಕವಾದರೂ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿನೇಶ್‌ ಪೋಗಟ್‌ ಪರವಾಗಿ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದ ಮಂಡಿಸಿದ್ದರು.

ಇನ್ನು ರೋಹಿತ್‌ ಎರಡು, ವಿರಾಟ್‌ ಕೊಹ್ಲಿ 5 ವರ್ಷ ಆಡ್ಬಹುದು: ಹರ್ಭಜನ್‌

ನವದೆಹಲಿ: ಭಾರತದ ನಾಯಕ ರೋಹಿತ್‌ ಶರ್ಮಾ ಇನ್ನು 2 ವರ್ಷ ಆಡಬಹುದು. ಆದರೆ ವಿರಾಟ್‌ ಕೊಹ್ಲಿ ಇನ್ನೂ 5 ವರ್ಷ ಆಡಬಲ್ಲರು ಎಂದು ಭಾರತದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ವಿರಾಟ್‌ ಸದ್ಯ ಭಾರತ ತಂಡದಲ್ಲಿರುವ ಅತ್ಯಂತ ಫಿಟ್‌ ಆಟಗಾರ. 

ಪಿಟ್ನೆಸ್‌ ವಿಚಾರದಲ್ಲಿ ಯಾವುದೇ 19 ವರ್ಷದ ಆಟಗಾರನನ್ನೂ ವಿರಾಟ್‌ ಸೋಲಿಸಬಲ್ಲರು. ಅವರು ಅಷ್ಟರ ಮಟ್ಟಿಗೆ ಫಿಟ್‌ ಆಗಿದ್ದಾರೆ. ಹೀಗಾಗಿ ಇನ್ನೂ 5 ವರ್ಷ ಆಡಬಹುದು. ರೋಹಿತ್‌ ಕೂಡಾ ಫಿಟ್‌ ಆಗಿದ್ದಾರೆ. ಅವರಿಬ್ಬರು ಉತ್ತಮವಾಗಿ ಆಡಿದರೆ ಭಾರತ ಗೆಲ್ಲುತ್ತದೆ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್‌ ಉಳಿದಿದೆ’ ಎಂದು ಭಾರತದ ಪರ 700+ ವಿಕೆಟ್‌ ಕಿತ್ತಿರುವ ಹರ್ಭಜನ್ ಹೇಳಿದ್ದಾರೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌