ಎರಡನೇ ಮಗುವಿಗೆ ತಂದೆಯಾದ ವಿರಾಟ್‌ ಕೊಹ್ಲಿ

KannadaprabhaNewsNetwork |  
Published : Feb 21, 2024, 02:03 AM ISTUpdated : Feb 21, 2024, 12:08 PM IST
ಎರಡನೇ ಮಗುವಿಗೆ ತಂದೆಯಾದ ವಿರಾಟ್‌ ಕೊಹ್ಲಿ | Kannada Prabha

ಸಾರಾಂಶ

ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಪತ್ನಿ, ಖ್ಯಾತ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.

ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಪತ್ನಿ, ಖ್ಯಾತ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. 

ಈ ಬಗ್ಗೆ ವಿರಾಟ್‌ ಕೊಹ್ಲಿ ಮಂಗಳವಾರ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫೆ.15ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಮಗುವಿಗೆ ಅಕಾಯ್‌ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ. 

2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕೊಹ್ಲಿ-ಅನುಷ್ಕಾ ದಂಪತಿಗೆ ಈಗಾಗಲೇ ವಾಮಿಕಾ ಹೆಸರಿನ ಹೆಣ್ಣು ಮಗುವಿದೆ.

ಸದ್ಯ ಕೊಹ್ಲಿ-ಅನುಷ್ಕಾ ಲಂಡನ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. 

ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್‌ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.

ಅನುಷ್ಕಾ ಗರ್ಭಿಣಿಯಾಗಿರುವ ಕಾರಣ ಕೊಹ್ಲಿ ಸರಣಿಯಲ್ಲಿ ಆಡುತ್ತಿಲ್ಲ ಎಂದು ವರದಿಯಾಗಿತ್ತು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ