ನವದೆಹಲಿ: ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಹ್ಲಿ 2013ರಿಂದ 2021ರ ವರೆಗೂ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ಈ ಅವಧಿಯಲ್ಲಿ ಆರ್‌ಸಿಬಿ ನಾಲ್ಕು ಬಾರಿ ಪ್ಲೇ-ಆಫ್ ಪ್ರವೇಶಿಸಿದ್ದರೆ, 2016ರಲ್ಲಿ ರನ್ನರ್-ಅಪ್ ಆಗಿತ್ತು. ಆದರೆ 2021ರಲ್ಲಿ ಕೊಹ್ಲಿ ನಾಯಕ ಸ್ಥಾನ ತೊರೆದಿದ್ದರು. ಬಳಿಕ ದ.ಆಫ್ರಿಕಾದ ಫಾಫ್ ಡು ಪ್ಲೆಸಿ ತಂಡದ ನಾಯಕರಾಗಿದ್ದಾರೆ. ಆದರೆ ಈ ಬಾರಿ ಹರಾಜಿಗೂ ಮುನ್ನ ಡು ಪ್ಲೆಸಿಯನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಡಲಿದ್ದು, ಮತ್ತೆ ಕೊಹ್ಲಿಯನ್ನು ನಾಯಕರನ್ನಾಗಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ.
06: ಪ್ರತಿ ಫ್ರಾಂಚೈಸಿ ರೀಟೈನ್ ಮಾಡಬಹುದಾದ ಆಟಗಾರರ ಸಂಖ್ಯೆ18: ಮೊದಲ ರೀಟೈನ್ ಆಟಗಾರನಿಗೆ ಸಿಗುವ ಮೊತ್ತ ₹18 ಕೋಟಿ.75: ಫ್ರಾಂಚೈಸಿಗಳು ರೀಟೆನ್ಶನ್‌ಗೆ ಬಳಸಬಹುದಾದ ಮೊತ್ತ ₹75 ಕೋಟಿ.05: ಗರಿಷ್ಠ 5 ಅಂತಾರಾಷ್ಟ್ರೀಯ ಆಟಗಾರರ ರೀಟೈನ್‌ಗೆ ತಂಡಗಳಿಗೆ ಅವಕಾಶ.02: ಪ್ರತಿ ತಂಡ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು.