ಸತತ 5ನೇ ಸೋಲು : ಯುಪಿ ವಿರುದ್ಧ 12 ರನ್‌ಗಳಲ್ಲಿ ಸೋತು ಚಾಂಪಿಯನ್‌ ಆರ್‌ಸಿಬಿಗೆ ಗೇಟ್‌ಪಾಸ್‌!

KannadaprabhaNewsNetwork |  
Published : Mar 09, 2025, 01:46 AM ISTUpdated : Mar 09, 2025, 04:10 AM IST
ಜಾರ್ಜಿಯಾ ವೊಲ್‌ | Kannada Prabha

ಸಾರಾಂಶ

ಡಬ್ಲ್ಯುಪಿಎಲ್‌. ಯುಪಿ ವಿರುದ್ಧ 12 ರನ್‌ಗಳಲ್ಲಿ ಸೋತು ಹೊರಬಿದ್ದ ಸ್ಮೃತಿ ಪಡೆ. ಯುಪಿ 8 ಪಂದ್ಯಗಳಲ್ಲಿ 3ನೇ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಲಖನೌ: ಸತತ 5 ಪಂದ್ಯಗಳಲ್ಲಿ ಸೋಲುಂಡ ಹಾಲಿ ಚಾಂಪಿಯನ್‌ ಆರ್‌ಸಿಬಿ 3ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಶನಿವಾರ ಯುಪಿ ವಾರಿಯರ್ಸ್‌ ವಿರುದ್ಧ ಸ್ಮೃತಿ ಮಂಧನಾ 12 ರನ್‌ ಸೋಲು ಕಂಡಿತು. ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಸೋಲುಂಡ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿತು.

 ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದ ಯುಪಿ, 8 ಪಂದ್ಯಗಳಲ್ಲಿ 3ನೇ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು.ಮೊದಲು ಬ್ಯಾಟ್‌ ಮಾಡಿದ ಯುಪಿ 5 ವಿಕೆಟ್‌ಗೆ 225 ರನ್‌ ಕಲೆಹಾಕಿತು. ಆಸ್ಟ್ರೇಲಿಯಾದ 21 ವರ್ಷದ ಜಾರ್ಜಿಯಾ ವೊಲ್‌ 56 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 99 ರನ್‌ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆ ಎಸೆತದಲ್ಲಿ ಸಿಂಗಲ್ ಪಡೆಯಲಷ್ಟೇ ಯಶಸ್ವಿಯಾದ ವೊಲ್‌, ಶತಕದಿಂದ ವಂಚಿತರಾದರು. 

ಕಿರಣ್‌ ನಾವ್ಗಿರೆ 16 ಎಸೆತಗಳಲ್ಲಿ 46, ಗ್ರೇಸ್‌ ಹ್ಯಾರಿಸ್‌ 22 ಎಸೆತಗಳಲ್ಲಿ 39 ರನ್‌ ಕೊಡುಗೆ ನೀಡಿದರು.ದಾಖಲೆಯ ಗುರಿ ಬೆನ್ನತ್ತಿದ ಆರ್‌ಸಿಬಿ, ಸ್ಫೋಟಕ ಆರಂಭದ ಹೊರತಾಗಿಯೂ 213 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ರಿಚಾ 33 ಎಸೆತಕ್ಕೆ 69, ಎಲೈಸಿ ಪೆರ್ರಿ 28, ಮೇಘನಾ 12 ಎಸೆತಕ್ಕೆ 27 ರನ್‌ ಗಳಿಸಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ.

225 ರನ್‌: ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ

ಯುಪಿ ತಂಡ 5 ವಿಕೆಟ್‌ಗೆ 225 ರನ್‌ ಗಳಿಸಿತು. ಇದು ಡಬ್ಲ್ಯುಪಿಎಲ್‌ನಲ್ಲೇ ಗರಿಷ್ಠ. 2023ರಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ 2 ವಿಕೆಟ್‌ಗೆ 223 ರನ್‌ ಗಳಿಸಿದ್ದು ಈ ವರೆಗಿನ ದಾಖಲೆ.

99 ರನ್‌: ಜಾರ್ಜಿಯಾ ವೊಲ್‌ 99 ರನ್‌ ಗಳಿಸಿದ್ದು ಡಬ್ಲ್ಯುಪಿಎಲ್‌ನಲ್ಲಿ ಜಂಟಿ ಗರಿಷ್ಠ. 2023ರಲ್ಲಿ ಗುಜರಾತ್‌ ವಿರುದ್ಧ ಆರ್‌ಸಿಬಿಯ ಸೋಫಿ ಡಿವೈನ್‌ ಕೂಡಾ 99 ರನ್‌ ಸಿಡಿಸಿದ್ದರು.

PREV

Recommended Stories

ಮಳೆಯ ನಡುವೆ ಜಾರಿ ಬಿದ್ದ ಟೀಂ ಇಂಡಿಯಾ!
ಈ ಸಲವೂ ಬೆಂಗ್ಳೂರಲ್ಲಿಲ್ಲ ಪ್ರೊ ಕಬಡ್ಡಿ!