ಪಪುವಾ ನ್ಯೂ ಗಿನಿ ವಿರುದ್ಧ ಎದ್ದು ಬಿದ್ದು ಗೆದ್ದ ವೆಸ್ಟ್‌ಇಂಡೀಸ್‌

KannadaprabhaNewsNetwork |  
Published : Jun 03, 2024, 12:31 AM ISTUpdated : Jun 03, 2024, 04:11 AM IST
ರಾಸ್ಟನ್‌ ಚೇಸ್‌ | Kannada Prabha

ಸಾರಾಂಶ

ಪಪುವಾ ನ್ಯೂ ಗಿನಿ ವಿರುದ್ಧ ವಿರುದ್ಧ 5 ವಿಕೆಟ್‌ ಜಯಭೇರಿ ಬಾರಿಸಿದ ವಿಂಡೀಸ್‌. ಪಪುವಾ 8 ವಿಕೆಟ್‌ಗೆ 136 ರನ್‌. ವಿಂಡೀಸ್‌ 19 ಓವರಲ್ಲಿ 5 ವಿಕೆಟ್‌ಗೆ 137.

ಗಯಾನಾ: ಟಿ20 ವಿಶ್ವಕಪ್‌ನ ಮೊದಲ ದಿನದ ಲೋ ಸ್ಕೋರ್‌ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ ತಂಡ ಪಪುವಾ ನ್ಯೂ ಗಿನಿ ವಿರುದ್ಧ 5 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಮೊದಲ ದಿನವೇ ಬಲಿಷ್ಠ ತಂಡಕ್ಕೆ ಪಪುವಾ ನ್ಯೂ ಗಿನಿ ಸೋಲಿನ ಆಘಾತ ನೀಡುವ ನಿರೀಕ್ಷೆಯಲ್ಲಿದ್ದರೂ ವಿಂಡೀಸ್‌ ಅಲ್ಪದರಲ್ಲೇ ಪಾರಾಯಿತು.

ಮೊದಲು ಬ್ಯಾಟ್ ಮಾಡಿದ ಪಪುವಾ 8 ವಿಕೆಟ್‌ಗೆ 136 ರನ್‌ ಕಲೆಹಾಕಿತು. ಸೆಸೆ ಬವು 50 ರನ್‌ ಗಳಿಸಿದರೆ, ಕಿಪ್ಲಿನ್ ಡೊರಿಗಾ 27 ರನ್‌ ಕೊಡುಗೆ ನೀಡಿದರು. ಸುಲಭ ಗುರಿ ಸಿಕ್ಕರೂ ಪರದಾಡಿದ ವಿಂಡೀಸ್‌ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಜಾನ್ಸನ್‌ ಚಾರ್ಲ್ಸ್‌ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ ಸೇರಿದರು. ಬಳಿಕ ಬ್ರೆಂಡಾನ್‌ ಕಿಂಗ್‌ 34, ನಿಕೋಲಸ್‌ ಪೂರನ್‌ 27 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ ತಂಡ ಸೋಲಿನ ಭೀತಿಗೆ ಒಳಗಾದರೂ, ಕೊನೆವರೆಗೂ ಕ್ರೀಸ್‌ನಲ್ಲಿ ನಿಂತ ರಾಸ್ಟನ್‌ ಚೇಸ್‌(27 ಎಸೆತಗಳಲ್ಲಿ ಔಟಾಗದೆ 42) ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಪಪುವಾ 136/8 (ಸೆಸೆ 50, ರಸೆಲ್‌ 2-19, ಅಲ್ಜಾರಿ 2-34), ವಿಂಡೀಸ್‌ 19 ಓವರಲ್ಲಿ 137/5 (ಚೇಸ್‌ 42, ಕಿಂಗ್ 34, ಅಸ್ಸಾದ್‌ 2-28) ಪಂದ್ಯಶ್ರೇಷ್ಠ: ರಾಸ್ಟನ್‌ ಚೇಸ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌
ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!