ತವರಲ್ಲಿ ನ್ಯೂಜಿಲೆಂಡ್‌ ವಿರುದ್ಧ 0-3 ವೈಟ್‌ವಾಶ್‌ ನೋವು ನೀಡಿತು: ಯುವರಾಜ್‌ ಸಿಂಗ್‌ ಬೇಸರ

KannadaprabhaNewsNetwork |  
Published : Jan 08, 2025, 12:17 AM ISTUpdated : Jan 08, 2025, 04:02 AM IST
ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಯುವರಾಜ್‌ ಸಿಂಗ್‌. | Kannada Prabha

ಸಾರಾಂಶ

ಆಸ್ಟ್ರೇಲಿಯಾದಲ್ಲಿ ಸೋತಿದ್ದು ಅಷ್ಟೊಂದು ಬೇಜಾರಾಗಲಿಲ್ಲ. ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 0-3ರಲ್ಲಿ ಸೋತಿದ್ದು ತುಂಬಾ ನೋವು ನೀಡಿತು. ನಮ್ಮವರ ಆಟ ಬಹಳ ಕಳಪೆಯಾಗಿತ್ತು ಎಂದು ಯುವರಾಜ್‌ ಸಿಂಗ್‌ ಬೇಸರ.

ದುಬೈ: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ 1-3ರ ಅಂತರದಲ್ಲಿ ಸೋತಿದ್ದಕ್ಕಿಂತ, ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 0-3ರಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿದ್ದು, ಹೆಚ್ಚು ನೋವು ನೀಡಿತು ಎಂದು ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಯುವರಾಜ್‌, ‘ತವರಿನಲ್ಲಿ ನಮ್ಮವರು 0-3ರಲ್ಲಿ ಸೋತಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಫಲಿತಾಂಶ ಬಹಳ ನೋವು ನೀಡಿತು. ಆಸ್ಟ್ರೇಲಿಯಾದಲ್ಲಿ ಈ ಹಿಂದಿನ 2 ಸರಣಿಯಲ್ಲಿ ನಾವು ಗೆದ್ದಿದ್ದೆವು. ಹಾಗಾಗಿ ಈ ಸಲದ ಸೋಲನ್ನು ತಕ್ಕಮಟ್ಟಿಗೆ ಒಪ್ಪಬಹುದು. ಆದರೆ, ನ್ಯೂಜಿಲೆಂಡ್‌ ವಿರುದ್ಧ ನಮ್ಮ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿತು’ ಎಂದಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ
ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?