;Resize=(412,232))
ವಾಷಿಂಗ್ಟನ್: ಶಂಕಿತ ಚೀನಾದ ಗೂಢಚಾರಿಣಿ ಸೇರಿ ಹಲವು ಮಹಿಳೆಯರ ಜತೆಗೆ ವಿವಾಹೇತರ ಸಂಬಂಧಗಳ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕದ ಪ್ರಮುಖ ಚಿಪ್ ನಿರ್ಮಾಣ ಸಂಸ್ಥೆಯಾದ ಎನ್‌ವಿಡಿಯಾದ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ಜೆನ್‌ಸೆನ್ ಹುವಾಂಗ್ ಅವರ ಸ್ಥಾನಕ್ಕೆ ಮೂವರು ಭಾರತೀಯರು ಸೇರಿ 11 ಮಂದಿ ಪ್ರಮುಖ ಟೆಕ್ ದಿಗ್ಗಜರು ರೇಸ್‌ನಲ್ಲಿದ್ದಾರೆ.
ಚಿಪ್ ಉತ್ಪಾದಕ ಸಂಸ್ಥೆ ಮೈಕ್ರಾನ್‌ನ ಮುಖ್ಯಸ್ಥ ಭಾರತೀಯ ಮೂಲದ ಸಂಜಯ್ ಮಲ್ಹೋತ್ರಾ, ಪಾಲೋ ಆಲ್ಟೋ ನೆಟ್‌ವರ್ಕ್‌ನ ಸಿಇಒ ನಿಕೇಶ್ ಅರೋರಾ, ಗೂಗಲ್ ಕ್ಲೌಡ್ ಸಿಇಒ ಆಗಿರುವ ಥಾಮಸ್ ಕುರಿಯನ್ ಅವರೂ ನಿವಿಡಿಯಾದ ಸಿಇಒ ಹುದ್ದೆ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ್ಯಪಲ್ ಕಂಪನಿಯ ಮಾಜಿ ಸಿಇಒ ಟಿಮ್ ಕುಕ್ ಅವರ ಪರ ಹೆಚ್ಚಿನ ಒಲವು ತೋರುತ್ತಿದ್ದಾರೆ ಎನ್ನಲಾಗಿದೆ.