;Resize=(412,232))
ಹಾಂಕಾಂಗ್: ವಿಶ್ವದ ಮುಂಚೂಣಿ ತಂತ್ರಜ್ಞಾನ ಸೇವಾ ಕಂಪನಿಯಾದ ‘ಮೈಕ್ರೋಸಾಫ್ಟ್ 365’ ಸೇವೆಯಲ್ಲಿ ಶುಕ್ರವಾರ 18 ಗಂಟೆಗಳಿಗೂ ಹೆಚ್ಚು ಕಾಲ ಸಮಸ್ಯೆ ಕಾಣಿಸಿಕೊಂಡಿದ್ದು, ಭಾರತ ಸೇರಿದಂತೆ ವಿಶ್ವದ 75ಕ್ಕೂ ಹೆಚ್ಚು ದೇಶಗಳ 14 ಕೋಟಿಗೂ ಹೆಚ್ಚು ಬಳಕೆದಾರರು ಭಾರೀ ಪ್ರಮಾಣದ ಸಮಸ್ಯೆಗೆ ತುತ್ತಾಗಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆ ವೇಳೆಗಷ್ಟೇ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಪರಿಹರಿಸುವಲ್ಲಿ ಕಂಪನಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಆದರೂ ಇಡೀ ದಿನ ಸಮಸ್ಯೆಯಿಂದಾಗಿ ವಿಮಾನಯಾನ, ಮಾಲ್. ಐಟಿ ಕಂಪನಿಗಳು ಸೇರಿ ನೂರಾರು ಉದ್ಯಮಗಳು ಕನೆಕ್ಟಿವಿಟಿ ಸಮಸ್ಯೆಗೆ ಒಳಗಾಗಿ ಸಂಕಷ್ಟಕ್ಕೆ ಒಳಗಾದವು.
ಟೀಮ್ಸ್, ಔಟ್‌ಲುಕ್, ಮೈಕ್ರೋಸಾಫ್ಟ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಕೋಪೈಲಟ್‌ನಂಥ ಮೈಕ್ರೋಸಾಫ್ಟ್ 365 ಸೇವೆಗಳು ‘ಕನೆಕ್ಟಿವಿಟಿ ಸಮಸ್ಯೆ’ಗೆ ತುತ್ತಾಗಿದ್ದವು.
ಇದರಿಂದಾಗಿ ಸಿಂಗಾಪುರ, ಆಸ್ಟ್ರೇಲಿಯಾದ ಮತ್ತಿತರ ದೇಶಗಳಲ್ಲಿ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಆ್ಯಂಥ್ರೋಪಿಕ್ಸ್, ಚಾಟ್‌ಜಿಟಿಪಿಯಂಥ ಎಐ ಕಂಪನಿಗಳು, ಭಾರತದಲ್ಲಿ ಏರಿಂಡಿಯಾ, ಇಂಡಿಗೋ ಸೇರಿದಂತೆ ವಿಶ್ವಾದ್ಯಂತ ವಿಮಾನಯಾನ ಕಂಪನಿಗಳು ಸಮಸ್ಯೆ ಎದುರಿಸಿದವು.
ವಿಶ್ವಾದ್ಯಂತ ಸುಮಾರು 43 ಕೋಟಿ ಗ್ರಾಹಕರು ಮೈಕ್ರೋಸಾಫ್ಟ್ 365 ಆ್ಯಪ್ ಬಳಸುತ್ತಿದ್ದು, ಇದರಲ್ಲಿ ಸುಮಾರು 13 ರಿಂದ14 ಕೋಟಿ ಗ್ರಾಹಕರಿಗೆ ಸಮಸ್ಯೆ ಆಗಿತ್ತು.
ಆಗಿದ್ದೇನು?: ಮೈಕ್ರೋಸಾಫ್ಟ್ 365 ಸೇವೆ ಬಳಸುತ್ತಿರುವ ಹಲವು ಗ್ರಾಹಕರಿಗೆ ಇ-ಮೇಲ್ ಅನ್ನು ಕಳುಹಿಸುವುದಾಗಲಿ, ಸ್ವೀಕರಿಸುವುದಾಗಲಿ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ಅವರ ಆ್ಯಪ್‌ಗಳಲ್ಲಿ ಫೈಲ್‌ಗಳು ಹಾಗೂ ವಿವರಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ
ಈ ಸಮಸ್ಯೆ ಹಿಂದೆ ಸೈಬರ್ ದಾಳಿ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಕಂಪನಿಯ ಮೂಲಸೌಲಭ್ಯಗಳ ಮೇಲೆ ಮಿತಿಮೀರಿದ ಒತ್ತಡದಿಂದಾಗಿ ಈ ರೀತಿ ಆಗಿರಬಹುದು. ಅಂದರೆ ಕಂಪನಿಯ ಸರ್ವರ್‌ಗಳು ಮಿತಿಗಿಂತ ಹೆಚ್ಚಿನ ಲೋಡ್‌ನಿಂದಾಗಿ ತಾಂತ್ರಿಕ ಸಮಸ್ಯೆಗೆ ತುತ್ತಾಗಿವೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.
ಈ ಹಿಂದೆ 2024ರಲ್ಲಿ ಇದೇ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಕ್ರೋಸಾಫ್ಟ್ ಸೇವೆ ಅಸ್ತವ್ಯಸ್ತಗೊಂಡಿತ್ತು. ವೈಮಾನಿಕ, ಆಸ್ಪತ್ರೆ, ಬ್ಯಾಂಕ್‌ಗಳು ಮತ್ತು ರಿಟೇಲ್ ಸ್ಟೋರ್‌ಗಳ ವ್ಯವಹಾರ ಅಸ್ತವ್ಯಸ್ತಗೊಂಡಿತ್ತು.
ಟೀಮ್ಸ್, ಔಟ್‌ಲುಕ್, ಮೈಕ್ರೋಸಾಫ್ಟ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಕೋಪೈಲಟ್‌ನಂಥ ಮೈಕ್ರೋಸಾಫ್ಟ್ 365 ಸೇವೆಗಳು ಕನೆಕ್ಟಿವಿಟಿ ಸಮಸ್ಯೆ. ಮೇಲ್ ಸ್ವೀಕಾರ, ರವಾನೆಗೆ ಅಡ್ಡಿ. ಚಾಟ್‌ಜಿಪಿಟಿನಂತ ಎಐ ಸೇವೆಯಲ್ಲಿ ವ್ಯತ್ಯಯ
ಯಾವ್ಯಾವ ವಲಯಕ್ಕೆ ತೊಂದರೆ?
ಸರ್ಕಾರಿ, ಖಾಸಗಿ ಕಂಪನಿಗಳು, ವಿಮಾನಯಾನ, ಸಾರಿಗೆ, ಮಾಲ್, ಆರೋಗ್ಯ ಮತ್ತು ತುರ್ತುಸೇವೆ, ಬ್ಯಾಂಕಿಂಗ್, ಹಣಕಾಸು ಸೇವೆ, ಶಿಕ್ಷಣ, ಶಾಲೆ, ಎಐ ಟೂಲ್‌ಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು