ಮಾಸ್ಕೋ: 137 ಜನರನ್ನು ಬಲಿಪಡೆದ ಇತ್ತೀಚಿನ ಮಾಸ್ಕೋದ ಕ್ರೋಕಸ್ ಹಾಲ್ ದಾಳಿ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಭಯೋತ್ಪಾದನೆ ಪ್ರಕರಣ ದಾಖಲಿಸಿದ್ದಾರೆ.
ಉಗ್ರ ದಾಳಿ ನಡೆದ ದಿನವೇ ಬಂಧನಕ್ಕೊಳಗಾದ ನಾಲ್ವರನ್ನು ಭಾನುವಾರ ಮಾಸ್ಕೋದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಂಧಿತ ನಾಲ್ವರೂ ಕಜಕಿಸ್ತಾನ ಮೂಲದವರು ಎಂದು ಮಾಹಿತಿ ನೀಡಲಾಗಿದೆ.
ವಿಚಾರಣೆಗೆ ಹಾಜರಾದ ವೇಳೆ ಎಲ್ಲಾ ನಾಲ್ವರು ಆರೋಪಿಗಳು, ವಿಚಾರಣೆ ವೇಳೆ ಪೊಲೀಸರಿಂದ ಭಾರೀ ಪೆಟ್ಟು ತಿಂದಿರುವ ವಿಷಯ ಅವರ ಮೈಮೇಲಿನ ಪೆಟ್ಟು ಗಾಯಗಳಿಂದ ಕಂಡುಬರುತ್ತಿತ್ತು.
ನಾಲ್ವರ ಪೈಕಿ ಇಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಉಳಿದ ಇಬ್ಬರ ಪೈಕಿ ಒಬ್ಬ ವಿಚಾರಣೆಯ ಬಹುತೇಕ ಸಮಯುವೂ ಕಣ್ಣುಬಿಡಲಾಗದ ಸ್ಥಿತಿಯಲ್ಲೇ ಕುಳಿತುಕೊಂಡಿದ್ದರೆ, ಮತ್ತೊಬ್ಬನನ್ನು ವೈದ್ಯರ ನೆರವಿನೊಂದಿಗೆ ಆಸ್ಪತ್ರೆಯಿಂದ ನೇರವಾಗಿ ಕೋರ್ಟ್‌ಗೆ ಕರೆ ತರಲಾಗಿತ್ತು.
ಪೊಲೀಸರ ಹೇಳಿಕೆ ದಾಖಲಿಸಿಕೊಂಡ ಕೋರ್ಟ್ ಬಳಿಕ ಮೇ 22ರ ವರೆಗೂ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.
ಕಳೆದ ಶುಕ್ರವಾರ ರಾತ್ರಿ ನಾಲ್ವರು ಉಗ್ರರು, ಕ್ರೋಕಸ್ ಸಿಟಿ ಹಾಲ್‌ನೊಳಗೆ ನುಗ್ಗಿ ಏಕಾಏಕಿ ಮಷಿನ್‌ಗನ್‌ಗಳಿಂದ ದಾಳಿ ನಡೆಸಿ, ಬಳಿಕ ಮಾಲ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ವೇಳೆ 137 ಜನರು ಸಾವನ್ನಪ್ಪಿದ್ದರು.