ವಿಶ್ವಸಂಸ್ಥೆ: ಕಳೆದ ವರ್ಷ ಅಕ್ಟೋಬರ್‌ನಿಂದ ನಡೆಯುತ್ತಿರುವ ಇಸ್ರೇಲ್ ಹಮಾಸ್ ಯುದ್ಧವನ್ನು ರಂಜಾನ್ ತಿಂಗಳ ವೇಳೆ ಕದನ ವಿರಾಮ ಘೋಷಿಸುವಂತೆ ವಿಶ್ವ ಸಂಸ್ಥೆ ಒತ್ತಾಯಿಸಿದೆ. ಯುದ್ಧ ಆರಂಭವಾಗಿ 5 ತಿಂಗಳ ನಂತರ ವಿಶ್ವಸಂಸ್ಥೆ ಕೈಗೊಂಡ ಮೊದಲ ಗೊತ್ತುವಳಿ ಇದಾಗಿದೆ.
ಆದರೆ ಗೊತ್ತುವಳಿಯಿಂದ ಅಮೆರಿಕ ಇದರಿಂದ ಹಿಂದುಳಿದಿದೆ. ಆದಾಗ್ಯೂ ಸಂಸ್ಥೆಯ ಇತರ 14 ದೇಶಗಳು ಒಟ್ಟಾಗಿ ಕದನ ವಿರಾಮದ ಪರ (14-0) ಮತ ಹಾಕಿದ್ದು ವಿಶೇಷವಾಗಿದೆ.
ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರ ಆಚರಣೆಯಾಗಿದ್ದು, ಈ ಅವಧಿಯಲ್ಲಿ ಅವರು ಪ್ರಾರ್ಥನೆ, ಉಪವಾಸ ಸೇರಿ ಹಲವು ಆಚರಣೆ ಮಾಡುತ್ತಾರೆ.
ಹೀಗಾಗಿ ವಿಶ್ವಸಂಸ್ಥೆಯ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ಯುದ್ಧಕ್ಕೆ ಕದನವಿರಾಮ ಘೋಷಿಸಬೇಕು ಎಂದು ಗೊತ್ತುವಳಿ ಮಂಡಿಸಿತು. ಇದಕ್ಕೆ ಅಮೆರಿಕ ಹಿಂದೇಟು ಹಾಕಿ, ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತು.
ನೆತನ್ಯಾಹು ವಿರೋಧ: ವಿಶ್ವಸಂಸ್ಥೆಯು ಕದನವಿರಾಮದ ಪರ ನಿರ್ಣಯ ಅಂಗೀಕರಿಸಿದ್ದನ್ನು ಖಂಡಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರದಿಂದ ಕೈಗೊಳ್ಳಬೇಕಿದ್ದ ಅಮೆರಿಕ ಪ್ರವಾಸ ರದ್ದುಮಾಡಿದೆ.