ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Jun 16, 2025, 01:48 AM ISTUpdated : Jun 16, 2025, 04:36 AM IST
ನೋ ಕಿಂಗ್ಸ್‌ ಪ್ರತಿಭಟನೆ | Kannada Prabha

ಸಾರಾಂಶ

  ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಹಿಂಸಾತ್ಮಕ ಹೋರಾಟ ನಡೆದಿರುವ ನಡುವೆಯೇ, ‘ಟ್ರಂಪ್ ಓರ್ವ ಸವಾಧಿಕಾರಿ. ಅವರು ತೊಲಗಬೇಕು’ ಎಂದು ಆಗ್ರಹಿಸಿ ದೇಶದ 50 ರಾಜ್ಯಗಳಲ್ಲಿ ವಾರಾಂತ್ಯದ ವೇಳೆ ‘ನೋ ಕಿಂಗ್ಸ್’ (ಬೇಡ ಸರ್ವಾಧಿಕಾರ) ಹೆಸರಿನ ಭಾರಿ ಪ್ರತಿಭಟನೆಗಳು ನಡೆದಿವೆ.

ಫಿಲಡೆಲ್ಫಿಯಾ (ಅಮೆರಿಕ): ವಲಸಿಗರ ಹೊರದಬ್ಬುವ ವಿರುದ್ಧ ಅಮೆರಿಕದ ಲಾಸ್‌ ಏಂಜೆಲೀಸ್‌ನಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಹಿಂಸಾತ್ಮಕ ಹೋರಾಟ ನಡೆದಿರುವ ನಡುವೆಯೇ, ‘ಟ್ರಂಪ್ ಓರ್ವ ಸವಾಧಿಕಾರಿ. ಅವರು ತೊಲಗಬೇಕು’ ಎಂದು ಆಗ್ರಹಿಸಿ ದೇಶದ 50 ರಾಜ್ಯಗಳಲ್ಲಿ ವಾರಾಂತ್ಯದ ವೇಳೆ ‘ನೋ ಕಿಂಗ್ಸ್’ (ಬೇಡ ಸರ್ವಾಧಿಕಾರ) ಹೆಸರಿನ ಭಾರಿ ಪ್ರತಿಭಟನೆಗಳು ನಡೆದಿವೆ.

ನ್ಯೂಯಾರ್ಕ್‌, ಡೆನ್ವರ್‌, ಶಿಕಾಗೋ, ಆಸ್ಟಿನ್, ಮಿನ್ನೆಸೋಟ, ಟೆಕ್ಸಾಸ್‌, ಅಟ್ಲಾಂಟಾ ಮತ್ತು ಲಾಸ್ ಏಂಜಲೀಸ್‌ ಸೇರಿದಂತೆ 50 ರಾಜ್ಯಗಳ ಪ್ರಮುಖ ನಗರಗಳು ಹಾಗೂ ಚಿಕ್ಕಪುಟ್ಟ ಊರುಗಳಲ್ಲೂ ಲಕ್ಷಾಂತರ ಮಂದಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ‘ ನೋ ಕಿಂಗ್ಸ್‌’ ಬ್ಯಾನರ್‌ ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಟ್ರಂಪ್‌ ಅವರು ನ್ಯಾಯಾಂಗ ಸೇರಿ ಸರ್ಕಾರದ ಯಾವುದೇ ಅಂಗಗಳನ್ನೂ ಬಿಡದೇ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ. ಕೋರ್ಟ್‌ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ವಲಸಿಗರನ್ನು ಹೊರಹಾಕುವ ಅವರ ನೀತಿಯೂ ಸರ್ವಾಧಿಕಾರದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಹಿಮ್ಮೆಟ್ಟಿಸಲು ಸರ್ಕಾರ ನೌಕಾ ಪಡೆಯನ್ನು ನಿಯೋಜಿಸಿತ್ತು. ಆದರೆ ಅದ್ಯಾವುದನ್ನೂ ಅಮೆರಿಕದ ಬೀದಿ ಬೀದಿಗಳಲ್ಲಿಯೂ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿ ಘೋಷಣೆಗಳನ್ನು ಕೂಗಿದ್ದು ಗಮನ ಸೆಳೆಯಿತು.

ಇದೇ ವೇಳೆ, ಅಮೆರಿಕ ಸೇನಾ ದಿನಾಚರಣೆ ಆಚರಣೆಯಲ್ಲಿ ಟ್ರಂಪ್ ಭಾಗಿಯಾಗಿದ್ದ ವೇಳೆ ಅಮೆರಿಕ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆಯೂ ನಡೆಯಿತು.

2 ತಿಂಗಳ ಹಿಂದೆಯೂ ಟ್ರಂಪ್ ವ್ಯಾಪಾರ ನೀತಿ ಹಾಗೂ ವಲಸಿಗರ ಗಡೀಪಾರು ನೀತಿ ವಿರುದ್ಧ ಅಮೆರಿಕದಲ್ಲಿ ಭಾರಿ ಪ್ರತಿಭಟನೆ ನಡೆದಿದ್ದವು.

ದೇಶವ್ಯಾಪಿ ಹೋರಾಟ

ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಅಧ್ಯಕ್ಷ ಟ್ರಂಪ್‌ ನೀತಿಗೆ ದೇಶವ್ಯಾಪಿ ಆಕ್ರೋಶ

ಕೆಲವು ರಾಜ್ಯಗಳಲ್ಲಿ ಆರಂಭವಾಗಿದ್ದ ಪ್ರತಿಭಟನೆ ಇದೀಗ ದೇಶವ್ಯಾಪಿ ವಿಸ್ತರಣೆ. ಟ್ರಂಪ್‌ಗೆ ಸಂಕಷ್ಟ

ಟ್ರಂಪ್‌ ಸರ್ವಾಧಿಕಾರ (ನೋ ಕಿಂಗ್ಸ್‌) ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಭಾರೀ ಪ್ರತಿಭಟನೆ

ಅಮೆರಿಕದ 50 ರಾಜ್ಯಗಳಲ್ಲಿ ಬೀದಿಗಿಳಿದ ಲಕ್ಷಾಂತರ ಜನ. ಅಧ್ಯಕ್ಷ ಡೊನಾಲಡ್‌ ವಿರುದ್ಧ ಘೋಷಣೆ

PREV
Read more Articles on

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!